ಅಧಿಕಾರಿಗಳಿಗೆ ದಿಗ್ಬಂಧನ

29_01_Mdy_01(Police Protest)
Published on

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಶುಕ್ರವಾರ ರೈತರು ಹಾಗೂ ಠೇವಣಿದಾರರು ಮುತ್ತಿಗೆ ಹಾಕಿ ಅಧಿಕಾರಿಗಳ ಸಮೇತ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಹಲವು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವ್ಯವಹರಿಸುತ್ತಿದ್ದೇವೆ. ಆದರೆ ಕೆಲ ವರ್ಷಗಳಿಂದ ನಾವು ಇಟ್ಟಿರುವ ಎಫ್.ಡಿ. ಹಣಕ್ಕೆ ಬಡ್ಡಿ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಕಚೇರಿಯ ಕಾರ್ಯದರ್ಶಿ ಕಳೆದ ಆರು ತಿಂಗಳಿನಿಂದಲೂ ಕೆಲಸಕ್ಕೆ ಬರುತ್ತಿಲ್ಲ. ಮೇಲ್ನೋಟಕ್ಕೆ ನಮ್ಮ ಹಣ ದುರುಪಯೋಗವಾದಂತೆ ಕಾಣುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಆದ್ದರಿಂದ ಸಹಕಾರ ಸಂಘದ ಮೇಲಧಿಕಾರಿಗಳು ಕಾರ್ಯದರ್ಶಿಯನ್ನು ತನಿಖೆಗೆ ಒಳಪಡಿಸಿ ನಮಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ದಿಗ್ಬಧನ: ಕ್ಯಾಷಿಯರ್ ಮೀನಾಕ್ಷಿ , ಅಟೆಂಡರ್ ಸೋಮಣ್ಣ ಕಚೇರಿಯಲ್ಲಿದ್ದರು. ಬೆಳಗ್ಗೆ ಕಚೇರಿ ಬಳಿ ಬಂದ ಠೇವಣಿದಾರರು ಬೀಗ ಜಡಿದು ಧಿಕ್ಕಾರ ಕೂಗಿದರು. ಈ ಬಗ್ಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿದಿರು. ಬಳಿಕ ಪೊಲೀಸರು ಆಗಮಿಸಿ , ಈ ಬಗ್ಗೆ ದೂರು ನೀಡಿ ಎಂದು ಮನವೊಲಿಸಿದ ಬಳಿಕ ಕಚೇರಿ ಬೀಗ ತೆಗೆದರು.
ಮುಡಿಗುಂಡ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಠೇವಣಿದಾರರ ಆಗ್ರಹದಂತೆ ಹಣದ ಬಗ್ಗೆ ಚರ್ಚಿಸಲು ಎರಡು ಭಾರಿ ಸಭೆ ಕರೆದರೂ ಸಂಘದಲ್ಲಿರುವ 12 ನಿರ್ದೇಶಕರು ಬರುತ್ತಿಲ್ಲ. ಇದ್ದರಿಂದ ಗ್ರಾಹಕರ ಸಮಸ್ಯೆ ಬಗೆೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮುಡಿಗುಂಡ ಗ್ರಾಮದ ಶಾಂತಮ್ಮ, ಲಕ್ಷ್ಮಮ್ಮ, ನಾರಾಯಣಸ್ವಾಮಿ, ಸೂರಪುರ ಗ್ರಾಮದ ಮಹೇಶ್, ರಂಗಸ್ವಾಮಿ, ಬೂದಿತಿಟ್ಟು ಗ್ರಾಮದ ಕುಮಾರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net