ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

27MDG3
Published on

ಮುಂಡರಗಿ: ತಹಸೀಲ್ದಾರ್ ಆಶಪ್ಪ ಪೂಜಾರಿ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ತಾಲೂಕಿನ ಬಿದರಳ್ಳಿ ಪುನರ್ವಸತಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಗ್ರಾಮಸ್ಥರು ಸ್ವ-ಇಚ್ಛೆಯಿಂದ ಗುದ್ದಲಿ, ಸಲಿಕೆ, ಬುಟ್ಟಿಗಳನ್ನು ತಂದು ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಗ್ರಾಮದಲ್ಲಿ ಬಸ್ ನಿಲ್ದಾಣ, ವಿವಿಧ ದೇವಸ್ಥಾನ, ಶಾಲೆ, ಆಸ್ಪತ್ರೆ, ಸಮುದಾಯ ಭವನ ನಿರ್ವಿುಸಲಾಗಿದೆ. ಹಳೇ ಗ್ರಾಮ ಸಂಪೂರ್ಣ ಸ್ಥಳಾಂತರಗೊಳ್ಳದ ಹಿನ್ನೆಲೆಯಲ್ಲಿ ಅಲ್ಲೀಗ ಜಾಲಿಗಿಡಗಳು ಬೆಳೆದಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಹೀಗಾಗಿ ತಾಲೂಕಾಡಳಿತದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಜೆಸಿಬಿಯಿಂದ ಜಾಲಿ ಗಿಡ-ಗಂಟಿಗಳನ್ನು ತೆರವುಗೊಳಿಸಲಾಯಿತು.

ಕಂದಾಯ, ನೀರಾವರಿ ಇಲಾಖೆ, ಹೆಸ್ಕಾಂ, ಗ್ರಾಪಂ ಸಿಬ್ಬಂದಿ, ಗ್ರಾಮದ ಸರ್ಕಾರಿ ಪ್ರೌಢಶಾಲೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಪ್ರಾಥಮಿಕ ಶಾಲೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಹಸೀಲ್ದಾರ್ ಆಶಪ್ಪ ಪೂಜಾರಿ ಮಾತನಾಡಿ, ಬಿದರಳ್ಳಿ ಪುನರ್ವಸತಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲ ಎಂದು ಗ್ರಾಮಸ್ಥರಿಂದ ದೂರು ಬಂದಿತ್ತು. ಈಗ ಎಲ್ಲರ ನೆರವಿನಿಂದ ಶೇ. 25 ಪ್ರದೇಶ ಸ್ವಚ್ಛಗೊಳಿಸಲಾಗಿದೆ. ಇನ್ನುಳಿದದ್ದನ್ನು ಹಂತ, ಹಂತವಾಗಿ ಸ್ವಚ್ಛತೆಗೊಳಿಸಲಾಗುವುದು ಎಂದರು. ತಾಪಂ ಇಒ ಎಸ್.ಎಸ್. ಕಲ್ಮನಿ, ನೀರಾವರಿ ಇಲಾಖೆ ಎಇಇ ವಿನಯ ಬಿ.ಎಂ., ಹೆಸ್ಕಾಂ ಎಇಇ ಪಾಂಡುರಂಗ ತಳವಾರ, ಪಿಡಿಒ ಅನಿಲಗೌಡ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಭಾಗ್ಯಲಕ್ಷಿ್ಮ ಇನಾಮತಿ, ವಿಶ್ವನಾಥ ಚನ್ನದ, ಎಲ್.ಆರ್. ಮಡ್ಡಿ, ಎಸ್.ಎಸ್. ಬಿಚ್ಚಾಲಿ, ಗ್ರಾಮ ಲೆಕ್ಕಾಧಿಕಾರಿಗಳಾದ ಚನ್ನವೀರಸ್ವಾಮಿ ಹಿರೇಮಠ, ರಜಿಯಾಬೇಗಂ ನೂರಬಾಷಾ, ಗ್ರಾಮಸ್ಥರಾದ ನಾಗರಾಜ ಮತ್ತೂರು, ಗೋಣೆಪ್ಪ ಚೌಡಾಳ, ಷಣ್ಮುಖ ಬಾಳಿಕಾಯಿ, ಗೋಣೆಪ್ಪ ನೀಲಗಾರ, ನಿಂಗರಾಜ ಬಸ್ಸೇಗೌಡ್ರ, ರವೀಂದ್ರಗೌಡ ಪಾಟೀಲ, ನೀಲಪ್ಪ ನಂದಗಾವಿ, ನಿಂಗಪ್ಪ ಕಿಲಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net