ಅಧಿಕಾರಿಗಳ ಸೂಚನೆ ಮೇರೆಗೆ ರಾಸುಗಳ ಜಾತ್ರೆ ನಿಷೇಧ!?..

ಅಧಿಕಾರಿಗಳ ಸೂಚನೆ ಮೇರೆಗೆ ರಾಸುಗಳ ಜಾತ್ರೆ ನಿಷೇಧ!?..
Published on

ಚನ್ನರಾಯಪಟ್ಟಣ: ಹೋಬಳಿಯ ಬೂಕನ ಬೆಟ್ಟದ ರಂಗನಾಥಸ್ವಾಮಿ ಜಾತ್ರೆಗೆ ಭಾನುವಾರದಿಂದ ರೈತರು ಎತ್ತುಗಳನ್ನು ಕರೆತರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಆದೇಶದಂತೆ ಪೊಲೀಸರು ಶನಿವಾರ ನಾಲ್ಕು ರಸ್ತೆಗೆ ಬ್ಯಾರಿಕೇಡ್ ಹಾಕಿ, ರಾಸು ಜಾತ್ರೆ ನಿಷೇಧ ಪ್ಲೆಕ್ಸ್‌ಗಳನ್ನು ಕಟ್ಟಿದರು.

ರಾಜ್ಯದಲ್ಲಿ ಚರ್ಮ ಗಂಟು ರೋಗ ಇರುವುದರಿಂದ ಶುಕ್ರವಾರ ಜಿಲ್ಲಾಧಿಕಾರಿಗಳು ಇದೇ 22ರವರೆಗೆ ಜಿಲ್ಲೆಯಲ್ಲಿ ರಾಸು ಜಾತ್ರೆ, ಸಂತೆಗಳನ್ನು ನಿಬರ್ಂಧಿಸಿ, ಆದೇಶ ಮಾಡಿದ್ದರು. ಶನಿವಾರ ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ನಂತರ ಬೂಕನಬೆಟ್ಟದ ಜಾತ್ರೆಗೆ ಎತ್ತುಗಳು ಸೇರುವುದನ್ನು ನಿಷೇಧಿಸಿದ್ದು ಮತ್ತು ರೈತರು, ಸಾರ್ವಜನಿಕರು ಸಹಕಾರ ನೀಡಬೇಕು ಎಂಬು ಮುಜರಾಯಿ ಇಲಾಖೆಯ ಪ್ರಕಟಣೆಯ ಬ್ಯಾನರ್ ಗಳನ್ನು ಜಾತ್ರಾ ಆವರಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಟ್ಟಲಾಯಿತು.

ತಾಲೂಕು ಆಡಳಿತ ನಿರ್ದೇಶನದಂತೆ ರಾಸುಗಳು ಜಾತ್ರೆಯ ಒಳಕ್ಕೆ ಬಾರದಂತೆ ತಡೆಯಲು, ನಾಲ್ಕು ರಸ್ತೆಯಲ್ಲಿ ಪೊಲೀಸ್ ಪಹರೆಯನ್ನು ಹಾಕಲಾಗಿದೆ ಎಂದು ಹಿರೀಸಾವೆ ಸಿಪಿಐ ಪ್ರಭಾಕರ್ ತಿಳಿಸಿದರು.

ಶನಿವಾರ ಕೆಲವು ರೈತರು ಎತ್ತುಗಳನ್ನು ಕಟ್ಟಲು ಜಾತ್ರೆ ಆವರಣದಲ್ಲಿ ದಾವಣಿಯನ್ನು ಸಿದ್ದಪಡಿಸುತಿರುವುದು ಕಂಡುಬಂತು ಎಸ್.ಐ ಸುಬ್ಬಯ್ಯ, ಆರ್.ಐ ವೀರಾಜ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net