ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

CTD 13 Yuvasene
Published on

ಚಿತ್ರದುರ್ಗ: ಆಹಾರ ಇಲಾಖೆ ಅಧಿಕಾರಿಗಳಿಂದ ವಿವಿಧ ರೀತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಮಾದಿಗ ಯುವಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಇಲಾಖೆಯ ಜಂಟಿ ನಿರ್ದೇಶಕ, ಕಚೇರಿ ವ್ಯವಸ್ಥಾಪಕಿ ಗಮನಕ್ಕೆ ತಂದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಆಹಾರ ಧಾನ್ಯಗಳು ಕಾಳಸಂಜೆಯಲ್ಲಿ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಗುಣಮಟ್ಟದ ಅಕ್ಕಿ, ರಾಗಿ ವಿತರಿಸುತ್ತಿಲ್ಲ. ಎಲ್ಲಿಯೂ ಕ್ರಮವಹಿಸಿಲ್ಲ. ಕೂಡಲೇ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಯುವಸೇನೆ ಜಿಲ್ಲಾಧ್ಯಕ್ಷ ಒ.ರಾಜಪ್ಪ, ಕರ್ನಾಟಕ ಜನಶಕ್ತಿಯ ಟಿ.ಶಫಿವುಲ್ಲಾ, ಮರಿಕುಂಟೆ ಮಹಾಲಿಂಗಪ್ಪ, ಅಂಜುಮ್, ಕೆ.ಎಸ್.ರೇಣುಕಾ, ಶಶಿಕುಮಾರ, ಶಂಕರಪ್ಪ, ಸೀಮಾ ಕೌಸರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net