ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ನಿರ್ವಹಣೆ

07tnpnewsfile01 (4)
Published on

ತಿ.ನರಸೀಪುರ: ನನ್ನ ಅಧಿಕಾರಾವಧಿಯಲ್ಲಿ ಶಾಸಕನಾಗಿ ಸರ್ಕಾರದಿಂದ ದೊರಕುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.

ತಾಲೂಕಿನ ಚೌಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗ್ರಾಮದ ಲಿಂಗಾಯತ ಹಾಗು ಕುರುಬ ಸಮಾಜದ ಮುಖಂಡರನ್ನು ಜೆಡಿಎಸ್ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

ಕಳೆದ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನಿರೀಕ್ಷೆಗೂ ಮೀರಿದ ಪ್ರೀತಿ ವಿಶ್ವಾಸ ತೋರಿಸಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸೌಧ ಪ್ರವೇಶ ಮಾಡಲು ಕಾರಣ ಕರ್ತರಾಗಿದ್ದೀರಿ ಎಂದರು.

ಗ್ರಾಮದ ನಾಗೇಂದ್ರ ಮುಖೇಶ್, ಸುರೇಂದ್ರ, ಶಿವಣ್ಣ, ಶ್ರೀಕಂಠ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕುರುಬ ಮತ್ತು ಲಿಂಗಾಯತ ಸಮುದಾಯದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ವೇಳೆ ಶಾಸಕರು ಕ್ಷೇತ್ರ ವ್ಯಾಪ್ತಿಯ ನಿಲಸೋಗೆ, ಹೆಮ್ಮಿಗೆ, ಶಂಭುದೇವನಪುರ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಮುಖಂಡ ಮೂಗೂರು ಶಿವಮೂರ್ತಿ, ಗ್ರಾ.ಪಂ. ಸದಸ್ಯ ಕೈಯ್ಯಂಬಳ್ಳಿ ಅಶೋಕ್, ಶಂಭುದೇವನಪುರ ರಮೇಶ್, ಎಂ.ಕೆ.ಅಡುಗೆ ಗ್ರೂಪ್ ಮಾಲಿಕ ಉಕ್ಕಲಗೆರೆ ಕುಮಾರ್, ಕಟ್ಟೇಪುರ ಸಿದ್ದಪ್ಪ, ಜಿ.ಪಂ. ಮಾಜಿ ಸದಸ್ಯ ಜೈಪಾಲ್ ಭರಣಿ ವಿ.ಪಿ.ಹುಂಡಿ ಸಂತೋಷ್ ಕುಮಾರ್, ಬಾಳೆಎಲೆ ಕುಮಾರ್, ಗೋಪಿ ಬೋರೇಗೌಡ, ನಿಖಿಲ್, ಭರತ್ ಸೇರಿದಂತೆ ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net