

ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಗುರವಾಗಿ ತೆಗೆದುಕೊಳ್ಳದೇ ಬಿಜೆಪಿ ಬಲ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಮುಖಂಡರು ಜಿಲ್ಲೆ, ತಾಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಟಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುಖಂಡರಿಗೆ ಸೂಚಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯ "ಕಮಲಕೃಪ'ಕ್ಕೆ ಬುಧವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಮತ ಬ್ಯಾಂಕ್ ಇದೆ, ನಾವು ಕೂಡ ದಲಿತರು, ಹಿಂದುಳಿದ ವರ್ಗದ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಭ್ರಮೆಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ 140ಕ್ಕೂ ಹೆಚ್ಚು ಸ್ಥಾನವನ್ನು ನಾವು ಗೆಲ್ಲಲಿದ್ದೇವೆ, ಇಂದಿನಿಂದಲೇ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಕೆಲಸವಾಗಬೇಕು, ಇರುವವರನ್ನು ಉಳಿಸಿಕೊಂಡು ದಲಿತ, ಒಬಿಸಿ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಗ್ರಾಮಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.
ಕೇವಲ ಚುನಾವಣೆ ಕಾರಣಕ್ಕೆ ಒಬಿಸಿ, ದಲಿತರೊಂದಿಗೆ ಆತ್ಮೀಯತೆ ಬೆಳಸಿಕೊಳ್ಳದೇ ಸದಾ ಅವರ ಕಷ್ಟ, ಸುಖಗಳಲ್ಲಿ ಜತೆಗಿರಬೇಕು, ಇದು ನಮ್ಮ ಕರ್ತವ್ಯ ಕೂಡ ಆಗಿದ್ದು ಎಲ್ಲರೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ನಾವು 140ಕ್ಕೂ ಹೆಚ್ಚು ೇತ್ರವನ್ನು ಗೆಲ್ಲುವ ಸಂಕಲ್ಪದಿಂದ ರಾಜ್ಯ ಪ್ರವಾಸ ಆರಂಭಿಸಿದ್ದೇವೆ, ಚುನಾವಣೆ ಸಂದರ್ಭದಲ್ಲಿಯೂ ನಾನೇ ಖುದ್ದು ಎಲ್ಲ ಕ್ಷೇತ್ರಗಳಲ್ಲಿ ಚುನಾವಣಾ ಸಭೆ ನಡೆಸುತ್ತೇನೆ. ಪ್ರತಿ ವಿಧಾನಸಭಾ ೇತ್ರದಲ್ಲಿ ಯುವಕರನ್ನು ಪಕ್ಷಕ್ಕೆ ಸೆಳೆಯಬೇಕು, ಎಲ್ಲೆಡೆಯೂ ದೊಡ್ಡ ಸಂಟನೆಯಾಗಬೇಕು, ಮಹಿಳಾ ಕಾರ್ಯಕರ್ತರು ಹೆಚ್ಚು ಸಮಯ ಕೊಟ್ಟು ಕೆಲಸ ಮಾಡಬೇಕಿದೆ, ಹೀಗಾದರೆ ನಮ್ಮ 140ರ ಗುರಿ ತಲುಪಲು ಸಾಧ್ಯ ಎಂದರು.
ವಿಜಯೇಂದ್ರ ಸ್ಪರ್ಧೆಗೆ ಕಾರ್ಯಕರ್ತರ ಮನವಿ: ಬಿಎಸ್ವೈ ಮಾತು ಮುಗಿಸಿದಾಗ ಸಭೆಯಲ್ಲಿದ್ದ ಕಾರ್ಯಕರ್ತರು ಬಿ.ವೈ.ವಿಜಯೇಂದ್ರ ಅವರನ್ನು ತುಮಕೂರು ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕರ್ತರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ, ವಿಜಯೇಂದ್ರ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಆದರೆ, ಯಾವ ಕ್ಷೇತ್ರ ಎಂಬುದನ್ನು ಅವರು ಹಾಗೂ ಪಕ್ಷ ತೀರ್ಮಾನಿಸಲಿದೆ. ಅವರನ್ನು ಬಳಸಿಕೊಂಡು ತುಮಕೂರು ಜಿಲ್ಲೆಯಲ್ಲಿ ಪ ಬಲಪಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಾನೂನಿಗೆ ರಾಹುಲ್ಗಾಂಧಿ, ಯಡಿಯೂರಪ್ಪ ಬೇರೆ ಅಲ್ಲ: ಕಾನೂನಿನ ಮುಂದೆ ಎಲ್ಲರೂ ಒಂದೆ. ರಾಹುಲ್ ಗಾಂಧಿ ಬೇರೆ, ಯಡಿಯೂರಪ್ಪ ಬೇರೆ ಅನ್ನುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದ ಗುಬ್ಬಿ ವೀರಣ್ಣ ರಂಗ ಮಂದಿರದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದ ತನಿಖೆಗೂ ತಮಗೂ ಯಾವುದೇ ಸಂಬಂಧ ಇಲ್ಲ. ಯಾರ ಬಗ್ಗೆ ಅನುಮಾನ ಬರುತ್ತೊ ಅಂತಹವರನ್ನು ತನಿಖೆಗೊಳಪಡಿಸುತ್ತಾರೆ. ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
ಸದ್ಯ ಇಡಿ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದು, ಮುಂದೇನಾಗುತ್ತೊ ಕಾದು ನೋಡೋಣ. ನಿರಾಪರಾಧಿಯಾದರೆ ಅವರು ಯಾವುದೇ ಗೊಂದಲ ಇಲ್ಲದೇ ವಾಪಸ್ ರ್ಬತಾರೆ. ಅಪರಾಧಿಗಳಾದರೆ ಸಹಜವಾಗಿ ಯಾರಿಗೆ ಯಾವ ರೀತಿಯಾಗಿ ಶಿೆ ಆಗಬೇಕು ಆ ರೀತಿಯಾಗಿ ಶಿೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೊಸ ಲೋಕಾಯುಕ್ತರನ್ನು ನೇಮಿಸಲಾಗಿದ್ದು, ಅವರ ಪರಿಧಿಯಲ್ಲಿ ಒಳ್ಳೆಯ ಕೆಲಸ ಮಾಡುವ ನಿರೀಕ್ಷೆ ಎಲ್ಲರದ್ದಾಗಿದೆ ಎಂದರು.
ವಿಜಯೇಂದ್ರ ಸ್ಪರ್ಧೆ ಖಚಿತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುವುದು ಖಚಿತ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು. ತುಮಕೂರು ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ಗೊತ್ತಿಲ್ಲ, ಅವರು ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ. ವರಿಷ್ಠರು ಅವರು ಎಲ್ಲಿಂದ ಸ್ಪರ್ಧೆಗಿಳಿಯಬೇಕು ಎಂಬುದನ್ನು ನಿಶ್ಚಯಿಸಲಿದ್ದಾರೆ ಎಂದರು.
ತಪ್ಪು ತಿದ್ದುವವವನೇ ನಿಜವಾದ ಪತ್ರಕರ್ತ
ತುಮಕೂರು: ಸಮಾಜದಲ್ಲಿ ಪತ್ರಕರ್ತರು ಅಂದರೆ ಕೇವಲ ಟೀಕೆ ಮಾಡುವವರಲ್ಲ. ತಪ್ಪು ಮಾಡುವವರನ್ನು ಎಚ್ಚರಿಸಿ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನುತಟ್ಟುವ ನೇರ, ನಿಷ್ಠ್ಠುರವಾದಿ ಪತ್ರಕರ್ತ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಡಾ.ಗುಬ್ಬೀವಿರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುವ ಧಾವಂತದಲ್ಲಿ ಸುದ್ದಿಯ ಸಾರ ಮರೆಯಬಾರದು. ಅಧಿಕಾರದಲ್ಲಿ ಇರಲಿ, ಬಿಡಲಿ ಪತ್ರಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.
ನಾನು ಮೊದಲಿನಿಂದಲು ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅಧಿಕಾರದಲ್ಲಿ ಇದ್ದಾಗಲೆಲ್ಲಾ ಪತ್ರಕರ್ತರ ಅಭ್ಯುದಯಕ್ಕೆ ನೆರವು ನೀಡಿದ ಆತ್ಮತೃಪ್ತಿ ಇದೆ. ಕರೊನಾ ಸಂದರ್ಭದಲ್ಲಿ ಪತ್ರಕರ್ತರು ಕ್ರಿಯಾಶೀಲವಾಗಿ ಕೆಲಸ ಮಾಡಿರುವುದು ಶ್ಲಾನೀಯ. ಈ ಹಿನ್ನೆಲೆಯಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರನ್ನು ಕರೊನಾ ಸೇನಾನಿಗಳೆಂದು ೂಷಿಸಿ ಉಚಿತ ಕರೊನಾ ಲಸಿಕೆ ನೀಡಿದ್ದಲ್ಲದೆ, ಕರೊನಾದಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲ ರೂ., ಆರ್ಥಿಕ ನೆರವು ಜತೆಗೆ ದಿನಸಿ ಕಿಟ್ ವಿತರಿಸಿದ್ದಾಗಿ ತಿಳಿಸಿದರು.
ಜನತಂತ್ರ ವ್ಯವಸ್ಥೆಯ ಕಾವಲುನಾಯಿಯಂತೆ ಪತ್ರಕರ್ತ ಇದ್ದು ಪ್ರಜಾಪ್ರಭುತ್ವದ 4ನೇ ಸ್ತಂಭವಾದ ಪತ್ರಿಕಾರಂಗದ ಶಕ್ತಿ ಪತ್ರಕರ್ತನ ಹೊಣೆಗಾರಿಕೆ ಮೇಲೆ ನಿಂತಿದೆ. ಪತ್ರಕರ್ತರ ಲೇಖನಗಳಿಗೆ ಸರ್ಕಾರಗಳೇ ಉರುಳಿ ಹೋದ ನಿದರ್ಶನಗಳಿವೆ. ಪತ್ರಕರ್ತನು ಪ್ರಜೆಗಳ ದನಿಯಾಗಿ ಅವರ ತುಡಿತಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸೋಷಿಯಲ್ ಮೀಡಿಯಾದ ಹಾವಳಿಯಲ್ಲಿ ನೈಜ ಸುದ್ದಿಯನ್ನು ಹೆಕ್ಕಿ ಬರೆಯುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಬ್ಲಾಕ್ ಮೇಲ್, ಬೇರೆ ಬೇರೆ ದಂಧೆಯಲ್ಲಿ ಪತ್ರಕರ್ತರು ಸುದ್ದಿಮನೆಗೆ ಬರುತ್ತಾ ಇದ್ದಾರೆ. ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಹಾಗಾದಲ್ಲಿ ಸಮಾಜದಲ್ಲಿ ಪತ್ರಕರ್ತರ ಗೌರವ ಉಳಿಯಲಿದೆ ಎಂದು ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು ಎಚ್ಚರಿಸಿದರು.
ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಗಂಗಹನುಮಯ್ಯ, ಬಿ.ವಿ.ಮಲ್ಲಿಕಾರ್ಜುನಯ್ಯ, ಜಿ.ಮರಿಸ್ವಾಮಿ, ಜಿ.ಸಿ.ಲೋಕೇಶ್, ಚಿ.ನಿ.ಪುರುಷೋತ್ತಮ್ ಮತ್ತಿತರರು ಇದ್ದರು.