ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ನೀರಾವರಿ ಯೋಜನೆ ಪೂರ್ಣ

17Hirebagewadi1
ಹಿರೇಬಾಗೇವಾಡಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥವನ್ನು ಶಂಕರ ಮಾಡಲಗಿ ಸ್ವಾಗತಿಸಿದರು. ರಾಜು ರೊಟ್ಟಿ, ಅಜರ ಪನ್ನಾಲಗಡ, ಪ್ರಕಾಶ ದೇಸಾಯಿ, ಬಸವರಾಜ ಧೂಳಪ್ಪನವರ ಇದ್ದರು.
Published on

ಹಿರೇಬಾಗೇವಾಡಿ: ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹೇಳಿದ್ದಾರೆ.

ಗ್ರಾಮದಲ್ಲಿ ಭಾನುವಾರ ಜೆಡಿಎಸ್ ಜನತಾ ಜಲಧಾರೆ ರಥವನ್ನು ಸ್ವಾಗತಿಸಿ ಮಾತನಾಡಿ, ಗೋವಾದಿಂದ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಕೈ ಅಧಿನಾಯಕಿ ಸೋನಿಯಾಗಾಂಧಿ ಹೇಳುತ್ತಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ನೀರಾವರಿ ವಿಷಯದಲ್ಲಿ ಪಾದಯಾತ್ರೆ ಮಾಡುವ ಮೂಲಕ ನಾಟಕವಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ನೀರಾವರಿ ಯೋಜನೆಗಳ ವಿಷಯದಲ್ಲಿ ಶೂನ್ಯವಾಗಿದೆ ಎಂದು ದೂರಿದರು.

ಜೆಡಿಎಸ್ ಬ್ಲಾಕ್ ಅಧ್ಯಕ್ಷ ರಾಜು ರೊಟ್ಟಿ, ಅಜರ ಪನ್ನಾಲಗಡ, ಪ್ರಕಾಶ ದೇಸಾಯಿ, ಬಸವರಾಜ ಧೂಳಪ್ಪನವರ, ಪ್ರಭು ಬೂದಯ್ಯನವರಮಠ, ವಿಶಾಲ ಯಡೂರ, ರಾಜು ಅಳ್ಳವಾಡ, ರಂಗನಗೌಡ ಮಾಧುಬರಮನ್ನವರ, ಮನ್ಸೂರ್ ಅತ್ತಾರ, ಬಸ್ಸಯ್ಯ ಹಿರೇಮಠ, ಯಲಗೌಡ ಮಾಧುಬರಮನ್ನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net