

ತಿ.ನರಸೀಪುರ: ರಾಜಕೀಯವಾಗಿ ಅಧಿಕಾರ ಸಿಗಲಿ, ಸಿಗದಿರಲಿ ಜನಪರ ಕೆಲಸ ಮಾಡುವುದು ಬಹು ಮುಖ್ಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಯುವ ಮುಖಂಡ, ಕೆಡಿಪಿ ಸದಸ್ಯ ಸುನೀಲ್ ಬೋಸ್ ಅವರ 41ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವೆ ಮಾಡಲು ರಾಜಕೀಯ ಅಧಿಕಾರವೇ ಸಿಗಬೇಕಾಗಿಲ್ಲ. ಜನಪರ ಕೆಲಸ ಮಾಡುವ ಮನೋಭಾವ ಬೆಳೆಸಿಕೊಂಡಾಗ ಹಲವು ದಾರಿ ಲಭಿಸುತ್ತವೆ. ಬಡವರು, ರೈತರು, ಮಹಿಳೆಯರ ಅಭಿವೃದ್ಧಿ ಪರವಾದಂತಹ ಕೆಲಸಕ್ಕೆ ಒತ್ತು ನೀಡಬೇಕು. ಇದಕ್ಕಾಗಿಯೇ ಸಾರ್ವಜನಿಕ ಕ್ಷೇತ್ರ ಮೀಸಲಾಗಿದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಸುನೀತಾ ವೀರಪ್ಪಗೌಡ, ಯತೀಂದ್ರ ಸಿದ್ದರಾಮಯ್ಯ, ಮೈಮುಲ್ ನಿರ್ದೇಶಕ ಆರ್.ಚೆಲುವರಾಜು, ತಾ.ಪಂ. ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಚಿತ್ರನಟ ಸಾಧುಕೋಕಿಲ ಮಾತನಾಡಿದರು.
ಉದ್ಯೋಗ ಮೇಳದಲ್ಲಿ 105 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಸುಮಾರು 4 ಸಾವಿರ ಯುವಜನರು ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಭಾಗವಹಿಸಿದ್ದರು. ಈ ಪೈಕಿ 1826 ಜನರು ವಿವಿಧ ಕಂಪನಿಗಳಿಗೆ ಆಯ್ಕೆಯಾದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ಮುನಾವರ್ ಪಾಷ, ಡಿ.ಪದ್ಮನಾಭ, ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ, ಜಿ.ಪಂ. ಮಾಜಿ ಸದಸ್ಯರಾದ ಸುಧಾ ಮಹದೇವಯ್ಯ, ಎಂ.ಸುಧೀರ್, ಯಾಚೇನಹಳ್ಳಿ ಅಶೋಕ್, ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಪುರಸಭೆ ಮಾಜಿ ಅಧ್ಯಕ್ಷರಾದ ಬಸವಣ್ಣ, ಮದನ್‌ರಾಜ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಟಿ.ಎಸ್.ಲೋಕೇಶ್, ಕ್ಷೇತ್ರಾಧ್ಯಕ್ಷ ಎಂ.ಡಿ.ಬಸವರಾಜು, ಚನ್ನಕೇಶವ, ಎಂ.ಎಲ್.ಹುಂಡಿ ಪ್ರಭುಸ್ವಾಮಿ, ಶ್ರೀಕಂಠ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಮನ್ಸೂರ್ ಅಲಿ, ಮುಖಂಡರಾದ ವಾಟಾಳ್ ನಾಗೇಶ, ನಾಗರಾಜು, ಅಕ್ಕೂರು ಗುರುಮೂರ್ತಿ, ಎ.ಜೆ.ವೆಂಕಟೇಶ್, ಹೆಮ್ಮಿಗೆ ಶೇಷಾದ್ರಿ, ಉಕ್ಕಲಗೆರೆ ಬಸವಣ್ಣ, ರಾಜು, ಮಹೇಶ್, ಎ.ಎನ್.ಸ್ವಾಮಿ, ಕಗ್ಗಲಿಪುರ ಕೆ.ಎಂ.ಮಧುಕುಮಾರ್, ಪ್ರೊ.ಜ್ಞಾನಪ್ರಕಾಶ್, ಲಕ್ಷ್ಮೀನಾರಾಯಣ, ಶ್ರೀಕಾಂತ್, ರಂಗಸಮುದ್ರ ರಮೇಶ್ ದಿವಾಕರ್ ಇದ್ದರು.