

ಅಳ್ನಾವರ: ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆ ನಂತರ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗದ ಕಾರಣ ಚುನಾಯಿತ ಸದಸ್ಯರು ಅಧಿಕಾರವಿಲ್ಲದೇ ದಿನ ಕಳಿಯುವಂತಾಗಿತ್ತು. ಆದರೆ, ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಗುರá-ವಾರ ಪ್ರಕಟಗೊಂಡ ಆದೇಶದಲ್ಲಿ ಅಧ್ಯಕ್ಷ ಸ್ಥಾನ- ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ-ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಇದರಿಂದ ಸದಸ್ಯರಲ್ಲಿ ಅಧಿಕಾರಕ್ಕಾಗಿ ಚಟá-ವಟಿಕೆ ಗರಿಗೆದರಿವೆ. ಕಳೆದ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಪ್ರಕಟಗೊಂಡ ಮೀಸಲಾತಿಯಲ್ಲಿ ಅಧ್ಯಕ್ಷ- ಮಹಿಳಾ ಅ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ- ಪುರುಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಈ ಬಾರಿ ಮೀಸಲಾತಿ ಬದಲಾವಣೆಗೊಂಡ ಕಾರಣ 18 ಸ್ಥಾನಗಳಲ್ಲಿ 8 ಸದಸ್ಯರು ಆಯ್ಕೆಗೊಂಡು ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಮತ್ತು 18 ಸದಸ್ಯರಲ್ಲಿ ಪ್ರಮುಖ ಸಮುದಾಯವಾಗಿರುವ ಲಿಂಗಾಯತ ಸಮಾಜದ ಏಕೈಕ ಮಹಿಳಾ ಸದಸ್ಯೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ತಾವು ಪ್ರಮುಖ ಆಕಾಂಕ್ಷಿಯಾಗಿರುವುದಾಗಿ ಸದಸ್ಯೆ ರಶ್ಮಿತೇಗೂರ ಹೇಳಿಕೆ ನೀಡಿದ್ದಾರೆ. ಹಿರಿಯ ಸದಸ್ಯರಾದ ಚಗನ ಪಟೇಲ್, ಮಧು ಬಡಸ್ಕರ, ರೂಪೇಶ ಗುಂದಕಲ್, ಅಮೂಲ ಗುಂಜಿಕರ ಸಹ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಬಹುಮತಕ್ಕೆ 10 ಸದಸ್ಯರು ಅವಶ್ಯವಿದೆ.
ಜೆಡಿಎಸ್ನ 6 ಸದಸ್ಯರಿದ್ದಾರೆ. ಪಕ್ಷೇತರ 1, ಬಿಜೆಪಿಯ 3 ಸ್ಥಾನದಿಂದ ಕಾಂಗ್ರೆಸ್ ತನ್ನ 8 ಸದಸ್ಯರೊಂದಿಗೆ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸುತ್ತಿದೆ.