

ಚಿತ್ರದುರ್ಗ: ಜಿಲ್ಲೆಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು,ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಡಿಸಿ ಟಿ.ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲೆ ಶೈಕ್ಷಣಿಕ ಪ್ರಗತಿ,ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ಮತ್ತು ಮಾದರಿ ಫ ಲಿತಾಂಶದ ಕುರಿತು ಮುಖ್ಯಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾನವೀ ಯತೆ ಮರೆತು ದಾಖಲಾತಿಗಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರವೇಶ ಆರಂಭ,ಅಗತ್ಯ ದಾಖಲೆಗಳು,ದಾಖಲಾತಿ ಮುಕ್ತಾಯ,ಶುಲ್ಕ,ಸರ್ಕಾರದ ಮಾನದಂಡ ಮತ್ತಿತರ ನಿಬಂಧನೆಗಳ ಕುರಿತಂತೆ ಪಾಲಕರಿಗೆ ತಿಳಿಯುವಂತೆ ಶಾಲೆ ಪ್ರಕಟಣಾ ಫಲಕದಲ್ಲಿ ಪ್ರಕಟಿಸಬೇಕು. ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು,ಜನರು ಜೀವನ ನಡೆಸುವು ದು ದುಸ್ತರವಾಗಿದೆ.
ಇಂಥ ಸಂದರ್ಭದಲ್ಲಿ ಶಾಲಾ ದಾಖಲಾತಿಗಾಗಿ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಪಡೆದು ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕು. ಸುಲಭ ಕಂತಿನಲ್ಲೂ ಶುಲ್ಕ ಪಾವತಿಸಲು ಅವಕಾಶ ನೀಡಬೇಕೆಂದು ಅವರು ಖಾಸಗಿ ಶಾ ಲೆಗಳ ಆಡಳಿತ ಮಂಡಳಿಯವರು ಜನಸ್ನೇಹಿಯಾಗಿರ ಬೇಕೆಂದರು.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಅತ್ಯಂತ ಕನಿಷ್ಠವಾಗಿದ್ದು,ಇದಕ್ಕೆ ಕಾರಣ ಏನೆಂಬುವುದರ ಕುರಿತು ಶಿಕ್ಷಕರು ಹಾ ಗೂ ಶಿಕ್ಷಣ ಸಂಸ್ಥೆಗಳು ಅವಲೋಕನ ನಡೆಸಬೇಕಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಆರಂಭದಲ್ಲೇ ನ್ಯೂನತೆಗಳು ಮರುಕಳಿಸದಂತೆ ನೋಡಿ ಕೊಂಡು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು. ಅಗತ್ಯವಿದ್ದಲ್ಲಿ ವಿಷಯಾಧಾರಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸ ಬೇಕೆಂದ ಡಿಸಿ,ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಮುಂಚೂಣಿ ಹತ್ತರಲ್ಲಿ ಒಂದಾಗಿರಬೇಕೆಂದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕ ರನ್ನು ಸಹಿಸಿಕೊಳ್ಳಲಾಗದೆಂದು ಎಚ್ಚರಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ಪ್ರಭಾರ ಡಿಡಿಪಿಐ ಎಂ.ನಾಸಿರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ ಮತ್ತಿತರರು ಇದ್ದರು.