ಅಧಿಕ ಮಾಸದಲ್ಲಿ ಭಾಗವತ ಶ್ರವಣ ಮಾಡಿ

PH 03
Published on

ಕಲಬುರಗಿ: ಪುರುಷೋತ್ತಮ ರೂಪಿ ಭಗವಂತನ ಅನುಗ್ರಹ ಪಡೆಯುವ ಪರ್ವಕಾಲ ಅಧಿಕಮಾಸ, ಧ್ಯಾನ, ವ್ರತ, ದಾನ, ಆಚರಣೆಗಳು ಮಾಡುವುದರಿಂದ ಪಾಪ ಮತ್ತು ಕರ್ಮಗಳನ್ನು ಕಳೆದುಕೊಂಡು ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಪಂ.ಮಾರುತಿ ಆಚಾರ್ಯ ಬೈಚಬಾಳ ತಿಳಿಸಿದರು.

ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುರುಷೋತ್ತಮ ಹೋಮದಲ್ಲಿ ಮಾತನಾಡಿದ ಅವರು, ಗೋ ಪೂಜೆ, ಗೋದಾನ, ಹಸುಗಳಿಗೆ ಗೋಗ್ರಾಸ ತಿನಿಸುವುದು ಹೆಚ್ಚು ಪುಣ್ಯಕರ. ವೈದಿಕರಿಗೆ, ಬ್ರಾಹ್ಮಣರಿಗೆ ದಾನ- ಧರ್ಮ ಮಾಡುವುದರಿಂದ ವಿಶೇಷ ಫಲ ಪ್ರಾಪ್ತವಾಗುತ್ತದೆ. ಅಧಿಕಮಾಸದಲ್ಲಿ ಉಪವಾಸ ವ್ರತ, ಶ್ರೀಮದ್ಬಾಗವತ ಶ್ರವಣ ಮಾಡಬೇಕು ಎಂದು ಹೇಳಿದರು.

ಬೆಳಗ್ಗೆ ಶ್ರೀ ಸೂರ್ಯನಾರಾಯಣ ಮತ್ತು ಮಹರ್ಷಿ ಯಾಜ್ಞವಲ್ಕ್ಯ ಗುರುಗಳಿಗೆ ಹರೀಶಾಚಾರ್ಯ, ರಾಘವೇಂದ್ರ ನಾಗರಾಳ, ರಾಮಾಚಾರ್ಯ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ವಿವಿಧ ಬಡಾವಣೆಯಲ್ಲಿರುವ 33 ವೈದಿಕ ದಂಪತಿಗೆ ಬಾಗಿನ, ಮುತ್ತೈದೆಯರಿಗೆ ಮಾಂಗಲ್ಯ- ಕಾಲುಂಗುರ ಹಾಗೂ ಅಪೋಪ ದಾನ ಸಮರ್ಪಣೆ ಮಾಡಲಾಯಿತು.

ಶ್ರೀನಿವಾಸಾಚಾರ್ಯ ಜಾಗೀರದಾರ, ಗುರುನಾಥರಾವ ತಿಂಥಣಿ, ವೆಂಕಟೇಶಾಚಾರ್ಯ ಜಾಗೀರದಾರ, ಶಾಮಾಚಾರ್ಯ ಬೈಚಬಾಳ, ರಾಮಾಚಾರ್ಯ ಅಗ್ನಿಹೋತ್ರಿ, ಭೀಮಾಚಾರ್ಯ ಜೋಶಿ, ಶಾಮಾಚಾರ್ಯ ಜೋಶಿ ವನದುರ್ಗ, ಗೋವಿಂದಾಚಾರ್ಯ ಜಾಗೀರದಾರ್, ಅಕ್ಷಯ ಶಾಂತಪುರ, ಪ್ರಹ್ಲಾದ್ ದೇವರು, ರಾಧಾಕೃಷ್ಣ ಜೋಶಿ, ಡಾ.ಅಜಯಕುಮಾರ ಗುಡದೂರು, ರಾಘವೇಂದ್ರ ಚಬನೂರು, ವೆಂಕಟೇಶ ಜೋಶಿ, ವಿನುತ ಜೋಶಿ, ವಿಜಯಾಚಾರ್ಯ ಬೈಚಬಾಳ, ಸಂತೋಷ ಜೋಶಿ, ಅಶ್ವತ್ಥ ಜೋಶಿ, ಪ್ರಾಣೇಶರಾವ ಅಗ್ನಿ, ಮಾಧವಾಚಾರ್ಯ ಜರಿಬಂಡಿ, ಗೋಪಾಲಾಚಾರ್ಯ ಆಶ್ರೀತ, ಕೇಶವಾಚಾರ್ಯ, ಕೀರ್ತಿ ಜೋಶಿ, ಅವಧೂತ ಕುಲಕರ್ಣಿ, ಅಂಬುಜಾ ಸಿಂದಗಿರಿ, ಪ್ರತಿಭಾ ಕುಲಕರ್ಣಿ, ಪೂರ್ಣಿಮಾ ದೇವರು, ಗೀತಾ ಕುಲಕರ್ಣಿ ವಿಜಯಲಕ್ಷ್ಮಿ ಇತರರಿದ್ದರು. ಮೈತ್ರಿ ಭಜನಾ ಮಂಡಳಿಯಿಂದ 33 ಪುರಂದರ ವಿಠಲನ ಅಂಕಿತವಿರುವ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net