ಅಧಿಕ ಮಾಸ ವಿಷ್ಣು ಸಹಸ್ರನಾಮ ಸಮರ್ಪಣಾ

IMG-20230819-WA0023
Published on

ಕಲಬುರಗಿ: ಕರುಣೇಶ್ವರ ನಗರದ ಜೈವೀರ ಹನುಮಾನ್ ಮಂದಿರದಲ್ಲಿ ಶ್ರೀಲಕ್ಷ್ಮಿನಾರಾಯಣ ಮತ್ತು ಶ್ರೀಹಂಸನಾಮಕ ಪಾರಾಯಣ ಸಂಘದಿಂದ ಅಧಿಕ ಮಾಸದ ನಿಮಿತ್ತ 33 ಮನೆಗಳಲ್ಲಿ ನಿರಂತರ ಪಾರಾಯಣ ಶನಿವಾರ ಸಮರ್ಪಣೆಗೊಂಡಿತು.

ಪಾರಾಯಣ ಸಂಚಾಲಕ ರವಿ ಲಾತೂರಕರ ಮಾತನಾಡಿ, ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮನೆ ಮನೆಯಲ್ಲಿ ಪಾರಾಯಣ ಮಾಡಲಾಗಿದೆ. ಆ ಮನೆಯವರು ಮತ್ತು ನಮ್ಮ ಪಾರಾಯಣ ಸದಸ್ಯರು ಧನ್ಯರಾಗಿದ್ದಾರೆ. ಇಂದು ಹನುಮಂತ ದೇವರ ಸಮ್ಮುಖದಲ್ಲಿ ಸಮರ್ಪಣೆ ಮಾಡಿದ್ದು ಅತ್ಯಂತ ಪುಣ್ಯಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಕರುಣೇಶ್ವರ ನಗರದಲ್ಲಿ ನೂತನ ಪಾರಾಯಣ ಸಂಘ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
ಡಾ. ಕೃಷ್ಣ ಕಾಕಲ್ವರ್, ಪಾರಾಯಣ ಸಂಘದ ಅಧ್ಯಕ್ಷರಾದ ಪದ್ಮನಾಭಾಚಾರ್ಯ ಜೋಶಿ, ನರಸಿಂಹರಾವ್ ಕುಲಕರ್ಣಿ, ರಾಮಾಚಾರ್ಯ ನಗನೂರ್, ಅನಿಲ್ ಕುಲಕರ್ಣಿ, ವಿನುತ ಜೋಶಿ, ಕಿಶನರಾವ್ ಮಟಮಾರಿ, ಜಗನ್ನಾಥಾಚಾರ್ಯ ಸಗರ, ಗಿರೀಶ್ ಕುಲಕರ್ಣಿ, ಡಾ. ಶ್ರೀನಿವಾಸ್ ಜಾಗಿರದಾರ್, ಅಪ್ಪಾರಾವ್ ಟಕ್ಕಳಕಿ ವಿಜಯಕುಮಾರ್ ಕುಲಕರ್ಣಿ, ಶಶಿಧರ ಜೋಶಿ, ರಂಗರಾವ್ ಕುಲಕರ್ಣಿ, ರಾಮಚಂದ್ರ ಸೂಗೂರ, ಪ್ರವೀಣ ಓಂಕಾರ್, ಸತ್ಯಬೋಧ ಕಾಗಲ್ಕರ್, ರವೀಂದ್ರ ದೇಶಪಾಂಡೆ, ಅನಿರುದ್ಧ, ಆಶಿಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net