

ಚಿತ್ರದುರ್ಗ: ಡೆಂೆ ಜ್ವರ ಪರೀಕ್ಷೆಗೆ ಸರ್ಕಾರ ವಿಧಿಸಿರುವ ದರದೆಡೆ ನಿಗಾ ವಹಿಸುವಂತೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿ ಸಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಶನಿವಾರ ಡೆಂೆ ಜ್ವರ ನಿಯಂತ್ರಣ ಕ್ರಮಕ್ಕಾಗಿ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅ ವ ರು,ಡೆಂೆ ಟೆಸ್ಟ್‌ಗೆ ನರ್ಸಿಂಗ್‌ಹೋಂ, ಖಾಸಗಿ ಲ್ಯಾಬ್‌ಗಳು ವಿಧಿಸುವ ದರ ಸರ್ಕಾರ ಸೂಚಿಸಿರುವ ದರ ಮೀರಬಾರದು. ಅಧಿಕ ದರ ವಸೂ ಲಿ ಮಾಡದಂತೆ ಎಚ್ಚರಿಕೆ ವಹಿಸಬೇಕು.
ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆ,ಪ್ರಯೋಗಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಡೆಂೆ ನಿಯಂತ್ರನ ನಿ ಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರ ಪಡೆಯಬೇಕು. ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಚಿಕಿತ್ಸೆಗೆ ಕ್ರಮ ವಹಿಸಬೇಕು. ಶಾಲಾ,ಕಾಲೇಜು ವಿದ್ಯಾ ರ್ಥಿಗಳೊಂದಿಗೆ ಜಾಥಾ ನಡೆಸುವ ಮೂಲಕ ಡೆಂೆ ವಿರುದ್ಧ ಜಾಗೃತಿ ಮೂಡಿಸಬೇಕೆಂದರು. ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ,ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಬಿಇಒ ಎಸ್.ನಾಗಭೂಷಣ್ ಮತ್ತಿತರ ಅಧಿಕಾರಿಗಳಿ ದ್ದರು.