

ಚಿತ್ರದುರ್ಗ: ಅಧಿಕ ತಾಪಮಾನದಿಂದ ಜಗತ್ತಿಂದು ಸಂಕಷ್ಟದಲ್ಲಿದ್ದು, ಇದನ್ನು ಎದುರಿಸು ಸಲುವಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ ಎಂದು ಭಾರತ ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್ ಹೇಳಿದರು.
ಸಿದ್ದವ್ವನದುರ್ಗ ಗ್ರಾಪಂ ಹಾಗೂ ಭಾರತ್ ಸೇವಾದಳದಿಂದ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆಯಲ್ಲಿ ಮಾತನಾಡಿ, ತಾಪಮಾನದಿಂದ ಮುಕ್ತಿ ಪಡೆಯಬೇಕಾದರೆ ಪರಿಸರ ರಕ್ಷಣೆ ಮಾಡಬೇಕಿದೆ ಎಂದರು.
ನಾಟಿವೈದ್ಯ ಡಾ.ಶಿವಣ್ಣ, ಭಾರತ್ ಸೇವಾದಳದ ವಲಯ ಸಂಘಟಕ ಅಣ್ಣಯ್ಯ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ನಾಗಣ್ಣ, ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ನಾಗರಾಜು, ಸಾಕಮ್ಮ, ಲಕ್ಷ್ಮೀದೇವಿ, ಶಿಕ್ಷಕಿ ಗೌರಮ್ಮ, ಸೇವಾದಳದ ಜಿಲ್ಲಾ ನಿರ್ದೇಶಕ ಲಕ್ಷ್ಮೀಪತಿ ಇದ್ದರು.