ಅಧಿಕ ಇಳುವರಿಗೆ ತಜ್ಞರ ಸಲಹೆ ಅಗತ್ಯ

5
ಗುಂಡೇವಾಡಿ ಗ್ರಾಮದಲ್ಲಿ ದ್ರಾ ಬೆಳೆಗಾರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ವಿಜಯ ಕುಂಬಾರ, ಶಿವಾನಂದ ಕುಂಬಾರ, ಚಿನ್ಮಯ ದೊಡಮನಿ, ಪವಾಡೆಪ್ಪ ಹುಬ್ಬಳ್ಳಿ ಇತರರಿದ್ದರು.
Published on

ಸಂಬರಗಿ: ದ್ರಾಕ್ಷಿ ಬೆಳೆಗಾರರು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಲು ಆಧುನಿಕ ತಂತ್ರಜ್ಞಾನ ಹಾಗೂ ತಜ್ಞರ ಸಲಹೆ, ತರಬೇತಿ ಪಡೆಯಬೇಕು ಎಂದು ಕೃಷಿ ತ ವಿಜಯ ಕುಂಬಾರ ಹೇಳಿದರು.

ಸಮೀಪದ ಗುಂಡೇವಾಡಿ ಗ್ರಾಮದಲ್ಲಿ ಬಸವೇಶ್ವರ ಕಷಿ ಸೇವಾ ಕೇಂದ್ರ ಹಾಗೂ ಯಶ್​ ಆಗ್ರೋ ಪ್ರಯೋಗಾಲಯ ಸಂಯುಕ್ತ ಆಶ್ರಯದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಏರ್ಪಡಿಸಿದ್ದ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಕರೆ ದ್ರಾ ಬೆಳೆಯಲು 2.5 ಲ ರೂ. ವೆಚ್ಚ ಮಾಡುತ್ತಾರೆ. ಆದರೆ, ಆಧುನಿಕ ತಂತ್ರಜ್ಞಾನ ಪದ್ಧತಿಯಿಂದ 1 ಎಕರೆ ದ್ರಾ ಬೆಳೆಯಲು 1 ಲ ರೂ.ರ್ಖಚಾಗುತ್ತದೆ. ರೈತರು ದ್ರಾ ನಾಟಿ ಮಾಡುವ ಪೂರ್ವದಲ್ಲಿ ನೀರು, ಮಣ್ಣ, ಪರೀೆ ಮಾಡಿ ನಾಟಿ ಮಾಡಬೇಕು. 8 ವರ್ಷದಿಂದ ಇಲ್ಲಿಯವರೆಗೆ 45 ಸಾವಿರ ರೆತರಿಗೆ ತರಬೇತಿ ನೀಡಿದ್ದೇ ಎಂದರು. ರೈತರು ತಯಾರಿಸುವ ಬೇದಾನಿ (ಒಣದ್ರಾಕ್ಷಿ) ಕೆಜಿಗೆ 300 ರೂ.ರಿಂದ 900 ರೂ.ವರೆಗೆ ಮಾರಾಟ ಮಾಡಿದ ದಾಖಲೆ ಇದೆ. ರೈತರಿಗೆ ಒಳ್ಳೆಯ ಇಳುವರಿ ಸಿಕ್ಕರೆ ಬಡತನದಿಂದ ಮುಕ್ತನಾಗುತ್ತಾನೆ ಎಂದರು.

ದ್ರಾ ಬೆಳೆಯುವ ರೈತರು ದ್ರಾ ಚಾಟ್ನಿ ಯಾವಾಗ ಮಾಡಬೇಕು, ಯಾವ ಅವಧಿಯಲ್ಲಿ ಔಷಧ ಸಿಂಪಡಿಸಬೇಕು ಎಂಬುದನ್ನು ತರಬೇತಿ ಅವಧಿಯಲ್ಲಿ ತಿಳಿಸಿಕೊಡಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರದ ಎಲ್ಲ ರೈತರಿಗೆ ಅನುಕೂಲವಾಗುವಂತೆ ಕೇಂದ್ರ ಸ್ಥಾನದಲ್ಲಿ ತರಬೇತಿ ನೀಡಲು ಸಿದ್ಧರಿದ್ದೇವೆ. ಅಥಣಿ ತಾಲೂಕಿನ ಅನಂತಪುರ, ಖಿಳೇಗಾಂವ, ಮದಬಾವಿ, ಸಂಕೋನಟ್ಟಿ ಗ್ರಾಮಗಳಲ್ಲೂ ಶ್ರೀ ತರಬೇತಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರಗತಿಪರ ರೈತ ಶಬ್ಬೀರ್​ ಮುಜಾವರ್​ ಐಗಳಿ ಮಾತನಾಡಿ, ಈ ಮೊದಲು ನಷ್ಟದಲ್ಲಿದ್ದ ನಾನು ತರಬೇತಿ ಪಡೆದ ನಂತರ ಎಕರೆಗೆ 4 ರಿಂದ 5 ಲ ರೂ. ಅದಾಯ ಪಡೆಯುತ್ತಿದ್ದೇನೆ ಎಂದರು. ಬಾಳಾಸಾಹೇಬ ಪೋಳ, ಚಿನ್ಮಯ ದೊಡಮನಿ, ಶಿವಾನಂದ ಕುಂಬಾರ, ಪವಾಡೆಪ್ಪ ಹುಬ್ಬಳಿ, ಸಹದೇವ ಮಧನ್ನವರ ಸೇರಿ 500 ರೆತರಿಗೆ ತರಬೇತಿ ನೀಡಲಾಯಿತು. ವಿಜಯ ಕುಂಬಾರ, ಶಿವಾನಂದ ಕುಂಬಾರ, ಚಿನ್ಮಯ ದೊಡಮನಿ, ಪವಾಡೆಪ್ಪ ಹುಬ್ಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net