ಅಧಿಕ ಇಳುವರಿ ಪಡೆಯಲು ಬದು ನಿರ್ಮಾಣ ಅಗತ್ಯ

1905 KML-01
Published on

ಕಮಲಾಪುರ: ಕಲಬುರಗಿಯಲ್ಲಿ ಅಧಿಕ ಉಷ್ಣಾಂಶವಿದೆ. ವ್ಯವಸಾಯಕ್ಕೆ ಇಂತಹ ಪ್ರತಿಕೂಲ ವಾತಾವರಣದಲ್ಲಿ ರೈತರಿಗೆ ಅಧಿಕ ಬೆಳೆ ಇಳುವರಿ ಪಡೆಯಲು ಬದು ನಿರ್ಮಾಣ ಅಗತ್ಯವಾಗಿದೆ. ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ ನುಡಿದರು.
ಕಲಬುರಗಿ ತಾಲೂಕಿನ ಕುಸನೂರ ತಾಂಡಾದಲ್ಲಿ ಜಿಪಂ, ತಾಪಂ ಕಚೇರಿ ಹಾಗೂ ಕುಸನೂರ ಗ್ರಾಪಂವತಿಯಿಂದ ಮಂಗಳವಾರ ಹಮ್ಮಿಕೊಂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬದು ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ರೈತರ ಜಮೀನುಗಳಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆಗಾಗಿ ಒತ್ತು ನೀಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ನಂತರ ಕುಸನೂರ, ನಂದೂರ (ಕೆ) ಮತ್ತು ನಂದೂರ (ಬಿ) ಗ್ರಾಮಗಳಲ್ಲಿನ ಕಾರ್ಮಿಕರಿಗೆ 400 ಜನರಿಗೆ ದಿನಸಿ ಕಿಟ್ಗಳನ್ನು ಹಾಗೂ ಮಾಸ್ಕ್ಗಳನ್ನು ವಿತರಣೆ ಮಾಡಿದರು.
ಮಲ್ಲಯ್ಯ ಸ್ವಾಮಿ, ತಾಪಂ ಸದಸ್ಯೆ ವಿಜಯಲಕ್ಷ್ಮೀ ಬಬಲಾದ, ಕುಸನೂರ ಗ್ರಾಪಂ ಅಧ್ಯಕ್ಷ ದಯಾನಂದ ಸಪ್ಪನ, ಜೀತೇಂದ್ರ ರಾಥೋಡ್, ಶಿವಕುಮಾರ ಗುತ್ತೇದಾರ, ನಿಂಗಣ್ಣ ಪೂಜಾರಿ, ರೇವಣಸಿದ್ದಯ್ಯ ಸ್ವಾಮಿ, ರಮೇಶ ತೇಗಿನಮನಿ, ದಶರಥ ತೇಗನೂರ, ಶರಣಪ್ಪ ಶಾಬಾದಿ, ರಾಜು ಮಾನಸಿಂಗ ಚವಾಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net