ಅಧರ್ಮದ ಹಾದಿ ಆತಂಕಕ್ಕೆ ರಹದಾರಿ

06HDK01
Published on

ಎಚ್.ಡಿ.ಕೋಟೆ: ಧರ್ಮದ ಹಾದಿಯಲ್ಲಿ ಸಾಗಿದರೆ ಯಾವುದೇ ಆತಂಕ ಇರುವುದಿಲ್ಲ ಎಂದು ಲಂಬಾಣಿ ಸಮುದಾಯದ ಮುಖಂಡ ಕೃಷ್ಣನಾಯಕ ಅಭಿಪ್ರಾಯಪಟ್ಟರು.


ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಧರ್ಮದ ಹಾದಿಯಲ್ಲಿ ನಡೆದರೆ ಆತಂಕದಿಂದ ಇರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಎಲ್ಲರೂ ಧರ್ಮದ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.


ದೇವರು ಹಾಗೂ ವ್ಯಕ್ತಿ ಎರಡು ದೃಷ್ಟಿಯಲ್ಲೂ ಶ್ರೀಕೃಷ್ಣನನ್ನು ನೋಡಬಹುದು. ದ್ವಾಪರ ಯುಗದಲ್ಲಿ ಧರ್ಮದ ದಾರಿಯಲ್ಲಿ ನಡೆದ ಪಾಂಡವರಿಗೆ ಶ್ರೀಕೃಷ್ಣ ಬೆಂಬಲವಾಗಿ ನಿಂತು ಧರ್ಮ ಗೆಲ್ಲಲು ಸಹಾಯ ಮಾಡಿದರು ಎಂದು ಹೇಳಿದರು.


ತಹಸೀಲ್ದಾರ್ ಸಣ್ಣರಾಮಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಗೋಪಾಲಕೃಷ್ಣ ಮೂರ್ತಿ, ಸುರೇಂದ್ರ, ಮಹೇಶ್, ಹರೀಶ್, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net