ಅಧ್ಯಕ್ಷ ಸ್ಥಾನಕ್ಕೆ ಕ್ಯಾತನಹಳ್ಳಿ ಅಶೋಕ್ ನಾಮಪತ್ರ ಸಲ್ಲಿಕೆ

3 mlv 3
ಮಳವಳ್ಳಿ ತಾಲೂಕು ಅಖಿಲ ವೀರಶೈವ ಮಹಸಭಾ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಕ್ಯಾತನಹಳ್ಳಿ ಅಶೋಕ್ ಚುನಾವಣಾಧಿಕಾರಿ ಮಹದೇವಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು. ಹೆಬ್ಬಣಿ ಬಸವರಾಜು, ಮಾಗನೂರು ರಾಜು, ದೊಡ್ಡಬೂಹಳ್ಳಿ ನಟರಾಜು, ಸುಬ್ರಮಣ್ಯಸ್ವಾಮಿ, ಶಿವಲಿಂಗಸ್ವಾಮಿ, ಗೌಡಗೆರೆ ಕುಮಾರ, ಮಹೇಶ್, ಜಗದೀಶ್ ಇದ್ದರು.
Published on

ಮಳವಳ್ಳಿ: ತಾಲೂಕು ಅಖಿಲ ವೀರಶೈವ ಮಹಸಭಾ ಕಾರ್ಯಾಕಾರಿ ಮಂಡಳಿ ಆಯ್ಕೆಗೆ ಜು.21 ರಂದು ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕ್ಯಾತನಹಳ್ಳಿ ಅಶೋಕ್ ಬುಧವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮಹದೇವಪ್ಪ ಅವರಿಗೆ ಉಮೇದುವಾರಿಕೆ ಸಲ್ಲಿಸಿದ ನಂತರ ಮಾತನಾಡಿ, ಶರಣ ಪರಂಪರೆಯನ್ನು ಆದರ್ಶಗಳು ಹಾಗೂ ವಚನ ಸಾಹಿತ್ಯದಿಂದ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ, ಮಹಾನೀಯರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಸಮಾಜದಲ್ಲಿ ಶರಣ ಸಮೂಹವನ್ನು ಸಂಘಟಿಸಲು ವೀರಶೈವ ಮಹಾಸಭ ಉತ್ತಮ ವೇದಿಕೆಯಾಗಿದೆ ಎಂದರು.

ಈಗಾಗಲೇ ನಾನೊಬ್ಬ ಬಸವ ತತ್ವ ಅನುಯಾಯಿಯಾಗಿ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದಲ್ಲಿ ಎಲ್ಲರೊಡನೆ ಸಂಘಟನೆಯ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕೆಲಸ ಮಾಡುತ್ತಿದ್ದೇನೆ. ಮಹಾಸಭೆಯ ಸದಸ್ಯ ಸ್ಥಾನ ಪಡೆದಿರುವ ಶರಣ ನನ್ನ ಸೇವೆಯನ್ನು ಗುರುತಿಸಿ ಮತದಾನದ ಮೂಲಕ ಬೆಂಬಲಿಸುತ್ತಾರೆಂಬ ವಿಶ್ವಾಸದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದರು.

ವೀರಶೈವ ಮುಖಂಡರಾದ ಹೆಬ್ಬಣಿ ಬಸವರಾಜು, ಮಾಗನೂರು ರಾಜು, ದೊಡ್ಡಬೂಹಳ್ಳಿ ನಟರಾಜು, ಸುಬ್ರಮಣ್ಯಸ್ವಾಮಿ, ಶಿವಲಿಂಗಸ್ವಾಮಿ, ಗೌಡಗೆರೆ ಕುಮಾರ, ಮಹೇಶ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net