ಅದ್ಧೂರಿ ಪುರಾಣ ಮಂಗಲೋತ್ಸವ

1009 KLB 01
Published on

ಕಲಬುರಗಿ: ಶ್ರಾವಣ ನಿಮಿತ್ತ ಭವಾನಿ ನಗರದ ಶ್ರೀಗುರು ಚನ್ನವೀರೇಶ್ವರ ಮಠದಲ್ಲಿ ನಡೆದ ಮುಗಳಖೋಡದ ಶ್ರೀಯಲ್ಲಾಲಿಂಗ ಮಹಾರಾಜರ ಪುರಾಣ ಮಹಾಮಂಗಲೋತ್ಸವ ಸೋಮವಾರ ಸಹಸ್ರಾರು ಭಕ್ತರ ಜೈಘೋಷಣೆಗಳ ಮಧ್ಯೆ ಅದ್ದೂರಿ ಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊAಡಿತು.
ಮಠದ ಪೀಠಾಧಿಪತಿ ಶ್ರೀ ಗುರುಪಾದಲಿಂಗ ಶಿವಯೋಗಿ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಚನ್ನವೀರ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಂತರ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು.
ಮಂಗಲೋತ್ಸವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಮಠ ಮಾನ್ಯಗಳ ಕೊಡುಗೆ ಅಪಾರ. ಜನರಲ್ಲಿ ಧರ್ಮ, ಸಂಸ್ಕೃತಿ ಬಿತ್ತುತ್ತಿವೆ ಎಂದರು.
ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಸ್ವಾಮೀಜಿ ಮಾತನಾಡಿ, ಲಿಂ.ಶ್ರೀ ಚನ್ನವೀರ ಶಿವಯೋಗಿಗಳು ಮನುಕುಲ ಉದ್ಧಾರಕ ಎಂದರು.
ಚನ್ನವೀರ ನಗರದಿಂದ ಆಗಮಿಸಿದ ಪಲ್ಲಕ್ಕಿಯಲ್ಲಿ ಶ್ರೀ ಗುರು ಚನ್ನವೀರ ಶಿವಯೋಗಿಗಳ ಭಾವಚಿತ್ರ ಇಟ್ಟ ನಂತರ ಉತ್ಸವಕ್ಕೆ ಚಾಲನೆ ದೊರೆಯಿತು. ಶ್ರೀಮಠದಿಂದ ಪ್ರಾರಂಭವಾಗಿ ರಾಮನಗರ ಕ್ರಾಸ್, ಭವಾನಿನಗರ, ಪೂಜಾರಿ ಮಠದ ವೃತ್ತ, ಕಾಕಡೆ ಚೌಕ್ ಮಾರ್ಗವಾಗಿ ಸಂಜೆಗೆ ಮಠಕ್ಕೆ ತಲುಪಿತು. ನಂತರ ಪೂಜೆ, ಮಂಗಳಾರತಿಯೊAದಿಗೆ ಮಂಗಲೋತ್ಸವ ಸಂಪ್ಪನವಾಯಿತು.
ಪುರಾಣಿಕರಾದ ವೇದಮೂರ್ತಿ ಮಡಿವಾಳಯ್ಯ ಶಾಸ್ತಿç, ಗವಾಯಿ ಯಶ್ವಂತ ಬಡಿಗೇರ, ತಬಲಾವಾದಕ ರಾಜಶೇಖರ ಕಟ್ಟಿಸಂಗಾವಿ ಅವರನ್ನು ಸನ್ಮಾನಿಸಲಾಯಿತು. ಭಕ್ತರಿಂದ ಶ್ರೀಗಳ ತುಲಾಭಾರ ನೆರವೇರಿತು.
ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಪ್ರಮುಖರಾದ ನೀಲಕಂಠರಾವ ಮೂಲಗೆ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಗಂಗಮ್ಮ ಮುನ್ನೊಳ್ಳಿ, ಬಸವರಾಜ ಮುನ್ನೋಳ್ಳಿ, ಶಾಂತು ದುಧನಿ, ಸುಖದೇವ ಪೂಜಾರಿ, ಸಂತೋಷ ಸಂಗೋಳ್ಳಿ, ರವಿ ಮಹಾಗಾವ, ಮಾಣಿಕರಾವ ಮಿರಕಲ್, ವಿಠ್ಠಲರಾವ ಗೋಗಿ, ಶಿವಶರಣಪ್ಪ ಗೋಗಿ, ಸಿದ್ದು ಸಂಗೋಳಗಿ, ಶಿವಶರಣಯ್ಯ ಸ್ವಾಮಿ ಕೊಟ್ಟರಗಿ, ಚಂದ್ರಕಾAತ ಹಸರಗುಂಡಗಿ, ಶಾಂತವೀರಯ್ಯ ಸ್ವಾಮಿ, ರೇವಣಸಿದ್ದಯ್ಯ ಶಾಸ್ತಿç, ರಾಜು ರೆಡ್ಡಿ, ಶರಣಪ್ಪ ರಾವೂರು, ಸಿದ್ದು ತಾಳಮಡಗಿ, ಶರಣು ವರನಾಳ, ಸುನಿಲ ಪೂಜಾರಿ, ಬಸವರಾಜ ಬುಕ್ಕಾ, ರಾಜು ಜಾಬಶೆಟ್ಟಿ, ಚನ್ನವೀರ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net