

ಕೊಡೇಕಲ್: ಕಣ್ವಮಠದ ಶ್ರೀ ಅಕ್ಷೆÆÃಭ್ಯತೀರ್ಥರ ೨೧೩ನೇ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡ ಮಧ್ಯಾರಾಧನೆಗೆ ಅಪಾರ ಭಕ್ತ ಸಾಗರದ ಮಧ್ಯೆ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆಯಿಂದಲೆ ಕ್ಷೇತ್ರದಲ್ಲಿ ಅಷ್ಟೊತ್ತರ, ಪಾರಾಯಣ ಸೇರಿ ವಿವಿಧ ಧಾರ್ಮಿಕ ಕರ‍್ಯಕ್ರಮ ಜರುಗಿದವು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಮೂಲಕ ಯತಿದ್ವಯರ ವೃಂದಾವನಗಳ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು. ನಂತರ ವಿವಿಧ ಪುಷ್ಪಗಳಿಂದ ಅಲಂಕೃತಗೊAಡ ಯತಿಗಳ ವೃಂದಾವನಗಳಿಗೆ ಪಂಡಿತ ಗಂಗಾಧರ ಆಚರ‍್ಯ ಜೋಶಿ ಕೊಡೇಕಲ್ ಮತ್ತು ಕೃಷ್ಣಾಚರ‍್ಯ ಜೋಶಿ ಗುಡಗುಂಟಿ ಮಂಗಳಾರುತಿ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಿದರು.
ಹರಿದಾಸ ಸಾಹಿತ್ಯ ಕುರಿತು ಸಿಂಧನೂರಿನ ಡಾ.ಮಧುಮತಿ ದೇಶಪಾಂಡೆ ವಿಶೇಷ ಉಪನ್ಯಾಸ ನೀಡಿದರು. ತಾಳಿಕೋಟೆ ಗಾಯತ್ರಿ ಭಜನಾ ಮಂಡಳಿ ಮತ್ತು ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ನಡೆಸಿಕೊಟ್ಟ ಭಜನೆ ಎಲ್ಲರ ಮನಸೂರೆಗೊಂಡಿತು.
ಈ ವೇಳೆ ಪಾಪನ್ನಾಚರ‍್ಯ ಜೋಶಿ ಸುರಪುರ, ಸತ್ಯನಾರಾಯಣ ಮರಟಗೇರಿ, ಮಧ್ವರಾವ ಕುಲಕರ್ಣಿ, ಕಮಲಾಕರ ದೇಶಪಾಂಡೆ, ಸತೀಶ ಜೋಶಿ ಹೊಸಹಳ್ಳಿ, ಸಂಧೀಪ ಘಾರೆ, ನಾಗೇಶ ಜೋಶಿ, ಶಾಮಸುಂದರ ಜೋಶಿ, ಮಧುಸೂದನ ಪುರಾಣಿಕ, ಶಶಿಕಾಂತ ದೇಶಪಾಂಡೆ ಇತರರಿದ್ದರು.
ಬಿಳೇಬಾವಿ, ನಾಗೂರು, ತಾಳಿಕೋಟೆ, ನಾರಾಯಣಪುರ, ಕೊಡೇಕಲ್, ಹುಣಸಿಹೊಳೆ, ಕಾಮನಟಗಿ, ಹುಣಸಗಿ, ಕಲಬುರಗಿ, ಬಾಗಲಕೋಟ, ಲಿಂಗಸೂಗೂರು, ಮುz್ದೆÃಬಿಹಾಳ ಸೇರಿದಂತೆ ಅನೇಕ ಕಡೆಯಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.