

ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪ್‌ನ ನೀಲಕಂಠೇಶ್ವರ ಜಾತ್ರೆ ಶ್ರದ್ಧಾ ಭಕ್ತಿಯಿಂದ ಸೋಮವಾರ ನಡೆಯಿತು. ಜಾತ್ರೆ ನಿಮಿತ್ತ ಪುರಾಣಿಕ ಬಸಯ್ಯ ಮಠ ಅವರಿಂದ ಕಳೆದ ಒಂದು ತಿಂಗಳಿನಿAದ ನಡೆದ ಯಲ್ಲಾಲಿಂಗ ಮಹಾರಾಜರ ಪುರಾಣ ಮಂಗಲ ನಡೆಯಿತು. ನಂತರ ಕಳಸ ಹಾಗೂ ನೀಲಕಂಠೇಶ್ವರ ಮೂರ್ತಿಯ ಗಂಗಾಸ್ನಾನ ಮತ್ತು ಸುಮಂಗಲೆಯರಿAದ ಪೂರ್ಣಕುಂಬ ಮೆರವಣಿಗೆ ನಡೆಯಿತು. ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ, ವಾಲ್ಮೀಕಿ, ಡಾ.ಅಂಬೇಡ್ಕರ್, ಬಸವೇಶ್ವರ ವೃತ್ತದ ಮೂಲಕ ಯುಕೆಪಿ ಕ್ಯಾಂಪ್‌ನ ನೀಲಕಂಠೇಶ್ವರ ದೇವಸ್ಥಾನವರೆಗೂ ಧಾರವಾಡನ ಮಹೇಶ ಹಿರೇಗೌಡರ್ ಅವರ ಕಲಾ ತಂಡದ ಶಿವತಾಂಡವ ನೃತ್ಯ ಮತ್ತು ರಾಹುಲ್ ಆಲಮೇಲ್ ಅವರ ಗಾಯನ ಆಕರ್ಷಕವಾಗಿತ್ತು.