

ಕಲಬುರಗಿ: ಮಹಾ ಮಾನವತಾವಾದಿ ಸಂತ ಕವಿ ಸರ್ವಜ್ಞರ ಜಯಂತ್ಯುತ್ಸವವನ್ನು ಫೆ.೨೦ರಂದು ನಗರ ಸೇರಿ ತಾಲೂಕು ಕೇಂದ್ರಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಎಲ್.ಕುಂಬಾರ ತಿಳಿಸಿದರು.
ಜಿ¯್ಲÁಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ಜಿ¯್ಲÁ ಕುಂಬಾರ ಸಮಾಜ ಸಹಯೋಗದಲ್ಲಿ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ನಡೆಸಿದ್ದು, ತಾಲೂಕುಗಳಲ್ಲಿ ಸ್ಥಳೀಯ ಆಡಳಿತ ಮತ್ತು ಕುಂಬಾರ ಸಮುದಾಯದ ಸಂಘಟನೆಗಳ ಸಹಯೋಗದಲ್ಲಿ ಆಚರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ೧೦.೩೦ಕ್ಕೆ ನಗರದ ಗಂಜ್ ನಗರೇಶ್ವರ ಶಾಲೆಯಿಂದ ವಿವಿಧ ಕಲಾ ತಂಡಗಳೊAದಿಗೆ ಸಂತ ಕವಿ ಸರ್ವಜ್ಞರ ಭಾವಚಿತ್ರದ ಬೃಹತ್ ಮೆರವಣಿಗೆಯೂ ಕಲಾ ತಂಡಗಳೊAದಿಗೆ ಕನ್ನಡ ಭವನದವರೆಗೆ ನಡೆಯಲಿದೆ. ಹುಣಸಿ ಹಡಗಿಲದ ಶ್ರೀ ಗುಂಡುರಾವ ಮುತ್ಯಾ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕನ್ನಡ ಭವನದಲ್ಲಿ ಮಧ್ಯಾಹ್ನ ೧.೩೦ಕ್ಕೆ ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಸಂತ ಕವಿ ಸರ್ವಜ್ಞರ ಅಭಿಮಾನಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಸರ್ವಜ್ಞರ ಜೀವನ ಮತ್ತು ಸಾಧನೆ ಕುರಿತು ಮಿಲೇನಿಯಮ್ ಕಾಲೇಜೀನ ಪ್ರಾಚಾರ್ಯ ಸಂಗಮೇಶ ಕೆ. ಕುಂಬಾರ ವಿಶೇಷ ಉಪನ್ಯಾಸ ನೀಡಲಿz್ದÁರೆ ಎಂದು ಹೇಳಿದರು.
ಸಮಾಜದ ಶರಣಬಸಪ್ಪ ಕುಂಬಾರ, ಭೀಮಾಶಂಕರ ಕುಂಬಾರ, ವಿಠಲ್ ಕುಂಬಾರ, ಅಶೋಕಕುಮಾರ ಕುಂಬಾರ ಇದ್ದರು.