ಅದ್ದೂರಿ ವಜ್ರೇಶ್ವರಿ ಪಲ್ಲಕ್ಕಿ ಉತ್ಸವ

Solpur
Published on

ಬೀದರ್: ತಾಲೂಕಿನ ಸೋಲಪುರ ಗ್ರಾಮದ ಶ್ರೀ ಯೋಗಿನಿ ವಜ್ರೇಶ್ವರಿ ದೇವಿಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮ ಎರಡು ದಿನ ಶೃದ್ಧೆ, ಭಕ್ತಿಯಿಂದ ಜರುಗಿತು.

ಗ್ರಾಮದ ಕೆರೆ ದಡದಲ್ಲಿರುವ ಮಂದಿರದಲ್ಲಿ ಮಹಾಪೂಜೆ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆದವು. ಶುಕ್ರವಾರ ಬೆಳಗ್ಗೆ ದೇವಿಗೆ ಅಭಿಷೇಕ, ನಂತರ ಸತ್ಯನಾರಾಯಣ ಪೂಜೆ, ಹೋಮ, ಹವನ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಮಹಾ ಪ್ರಸಾದ, ಸಂಜೆ ಸತ್ಸಂಗ ಹಾಗೂ ರಾತ್ರಿಯಿಡೀ ಜಗನ್ನಾಥ ನಾನಕೇರೆ ತಂಡದಿಂದ ಭಜನೆ ನಡೆಯಿತು.

ಶನಿವಾರ ಬೆಳಗ್ಗೆ ಶ್ರೀ ವಜ್ರೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ವಿವಿಧ ಬಡಾವಣೆಗಳಿಗೆ ಪಲ್ಲಕ್ಕಿ ತೆರಳಿತು. ಈ ವೇಳೆ ಸ್ಥಳಿಯರು ಪೂಜೆ ಸಲ್ಲಿಸಿ ದರ್ಶನ ಪಡೆದರು. ಚಿಲ್ಲರ್ಗಿಯ ಪಾಂಡುರಂಗ ಭಜನೆ ಮಂಡಳಿಯಿಂದ ಚಕ್ರಿ ಭಜನೆ ಜರುಗಿತು.

ಎರಡು ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದರು. ಶ್ರೀ ಯೋಗಿನಿ ವಜ್ರೇಶ್ವರಿ ದೇವಿ ಪುಣ್ಯಭೂಮಿಯ ಅಧ್ಯಕ್ಷ ರಮೇಶ ಮನ್ನಳ್ಳಿಕರ್, ಪ್ರಮುಖರಾದ ದೇವೇಂದ್ರ ವಗ್ಗೆನೋರ, ರವಿ ಮಲ್ಕನೋರ್, ಸಿದ್ದು ಹೈಬತ್ತೆ, ಮಲ್ಲಿಕಾರ್ಜುನ ಸಿರ್ಸಗಿ, ಶೇಖಪ್ಪ ಜತನೋರ್, ಧನರಾಜ ಮಲ್ಕನೋರ, ಸಂಜು ಮಲ್ಕನೋರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net