ಅದ್ದೂರಿ ಮಲ್ಲಮ್ಮ ಜಯಂತಿಗೆ ನಿರ್ಧಾರ

04 ydg 04
Published on

ಯಾದಗಿರಿ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಮೇ ೧೦ರಂದು ಸಹೋದರ ಸಮಾಜ ಒಳಗೊಂಡAತೆ ಅದ್ಧೂರಿಯಾಗಿ ಮಾಡಲು ಜಿ¯್ಲÁ ರೆಡ್ಡಿ ಸಮಾಜ ನಿರ್ಧರಿಸಿದೆ ಎಂದು ಜಿಲ್ಲಾ ಪ್ರಧಾನ ಕರ‍್ಯದರ್ಶಿ ಡಾ.ಸಿದ್ದರಾಜ ರಡ್ಡಿ ಹಾಗೂ ಜಿಲ್ಲಾ ಕೋಶಾಧ್ಯಕ್ಷ ಮಲ್ಲಣ್ಣಗೌಡ ಹಳಿಮನಿ ಜಂಟಿಯಾಗಿ ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷ ರಾಮರಡ್ಡಿಗೌಡ ತಂಗಡಗಿ ಅಧ್ಯP್ಷÀತೆಯಲ್ಲಿ ಭಾನುವಾರ ಬಸವೇಶ್ವರ ನಗರದ ಈಶ್ವರ ಬಸವಣ್ಣ ದೇವಸ್ಥಾನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಲಕ್ಷಿö್ಮÃ ದೇವಸ್ಥಾನದಲ್ಲಿ ಅಂದು ಬೆಳಗ್ಗೆ ೧೦-೩೦ರಿಂದ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಅದಕ್ಕೂ ಮುನ್ನನಗರಾದ್ಯಂತ ಕಾರ್‌ಗಳ ರ‍್ಯಾಲಿ ನಡೆಯಲಿದೆ. ಜಿ¯್ಲÁ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಈ ಕರ‍್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಅAದು ಸಂಜೆ ೪-೩೦ಕ್ಕೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ತಾಯಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಮೆರವಣಿಗೆಯಲ್ಲಿ ೧೦೧ ಜನ ಕುಂಭ ಕಳಶ ಹೊತ್ತ ಮಹಿಳೆಯರು, ಬಂಜಾರಾ ನೃತ್ಯ, ಮಹಿಳಾ ಡೊಳ್ಳು, ಛತ್ರ ಚಾಮರ, ಮುಧೋಳದ ತಮಟೆ ವಾದನ ತಂಡ, ಗಾರುಡಿ ಗೊಂಬೆಗಳು, ಭಾಜಾ-ಭಜಂತ್ರಿ ಸೇರಿ ಹಲವು ಕಲಾತಂಡಗಳು ಭಾಗವಹಿಸಲಿವೆ. ಅಲ್ಲದೆ ಅಂದು ಸಂಜೆ ನಡೆಯುವ ಕರ‍್ಯಕ್ರಮದಲ್ಲಿ ಅಬ್ಬೆತುಮಕೂರು ಡಾ.ಗಂಗಾಧರ ಶ್ರೀಗಳು ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ವೇಳೆ ರಾಚಣ್ಣಗೌಡ ಮುದ್ನಾಳ, ಸೋಮನಾಥರಡ್ಡಿ ಬಾಲಚೇಡ್, ಚಂದ್ರಾಯಗೌಡ ದೇವಣಗಾಂವ ಗೋಗಿ,ಬಸವಂತರೆಡ್ಡಿ ಕಾರಡ್ಡಿ ಮಲ್ಹಾರ, ಬಸನಗೌಡ ಪಾಟೀಲ ಚಾಮನಹಳ್ಳಿ, ಸಿದ್ರಾಮರಡ್ಡಿ ಕಾಮರಡ್ಡಿ, ಅಂಬರೀಶ ಪಾಟೀಲ್ ಬಂದಳ್ಳಿ, ರಮೇಶರಡ್ಡಿ ದೊಡ್ಡಮನಿ, ವಿಶ್ವನಾಥರಡ್ಡಿ ಅಬ್ಬೆತುಮಕೂರ, ಸಾಹೇಬರಡ್ಡಿ ದೇಶಪಾಂಡೆ, ಸಿದ್ದುಪ್ರಕಾಶರಡ್ಡಿ, ಸಿದ್ದುರಡ್ಡಿ ತಂಗಡಗಿ, ಸೂಗಣ್ಣಗೌಡ ಪೊಲೀಸ್ ಪಾಟೀಲ್, ಮಲ್ಲುಗೌಡ ಪಗಲಾಪೂರ, ಬಸ್ಸುಗೌಡ ಕೋನಾಳ,ರವಿಗೌಡ ಕರಡ್ಡಿ ಮಲ್ಹಾರ, ನಿಖಿಲï ಪಾಟೀಲ, ರುದ್ರಗೌಡ ಗುರಸುಣಿಗಿ,ನಿಂಗಾರಡ್ಡಿ ಯಡ್ಡಳ್ಳಿ, ಶಿವು ಪಾಟೀಲ್ ಕೊಂಗAಡಿ, ಬಸವರಡ್ಡಿ ಠಾಣಗುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net