ಅದ್ದೂರಿ ಮಂಡೇಲ್ಲಮ್ಮ ದೇವಿ ಜಾತ್ರೆ

ydg02
Published on

ಕೊಡೇಕಲ್: ಗ್ರಾಮದ ಮಂಡೇಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ದೇವಿ ಉತ್ಸವ ಮೂರ್ತಿ ಹಾಗೂ ಕಳಸದ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಶುಕ್ರವಾರ ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಬೆಳ್ಳಿ ಉತ್ಸವ ಮೂರ್ತಿ ಮತ್ತು ದೇವಸ್ಥಾನದ ಕಳಸವನ್ನು ಮೆರವಣಿಗೆ ಮೂಲಕ ಗಂಗಾಸ್ನಾನಕ್ಕೆ ತೆರಳುವ ವೇಳೆ ಪುರವಂತರ ಸೇನೆ ನೋಡುಗರ ಗಮನ ಸೆಳೆಯಿತು. ಗಂಗಾಸ್ನಾನದೊAದಿಗೆ ದೇವಸ್ಥಾನಕ್ಕೆ ಆಗಮಿಸಿ ಗರ್ಭಗುಡಿಯಲ್ಲಿ ಉತ್ಸವ ಮೂರ್ತಿಯನ್ನಿರಿಸಿ ಮಂಡೇಲ್ಲಮ್ಮ ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದಕ್ಕೂ ಪೂರ್ವ ಗುರುವಾರ ಅಹೋರಾತ್ರಿ ಭಜನೆ ಮಾಡಲಾಯಿತು.
ಈ ವೇಳೆ ರಂಗನಾಥ ದೋರಿ, ಕನಕು ಜಿರಾಳ, ಡಾ.ಬಿ.ಬಿ.ಬಿರಾದಾರ, ಗಿರಿಯಪ್ಪ ಮನ್ಯಾಳ, ಪಾಯಣ್ಣ ಸಾಹುಕಾರ ಬಪ್ಪರಗಿ, ಬಸಣ್ಣ ತುಂಬಗಿ, ಸಿದ್ರಾಮ ತುಂಬಗಿ, ಅಂಬಣ್ಣ ದೊರಿ, ರಮೇಶ ಉಪ್ಪದಿನ್ನಿ, ಮಲ್ಲಣ್ಣ ಲಕ್ಷ್ಮೀಪುರ, ಸಂಗಮೇಶ ಬಿಜಾಪುರ, ಮನೋಹರ ಬಬಲೇಶ್ವರ, ಮುತ್ತು ಬಿರಾದಾರ, ವಿಶಾಲ್ ಅಂಗಡಿ, ಹಣಮಂತ್ರಾಯ ಕುಂಬಾರ, ಚಿನ್ನಪ್ಪ ಕುಂಬಾರ, ಶಿವು ಕುಂಬಾರ, ವಿಶ್ವನಾಥ ಬಬಲೇಶ್ವರ, ಭೀಮಾಶಂಕರ ತಮದಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net