

ಯಾದಗಿರಿ: ಅಧಿಕಾರಿಗಳು ಪದೇ, ಪದೆ ರೆಡಿಮೆಡ್ ಉತ್ತರ ಕೊಟ್ಟರೇ ತಾವು ಮುಂದಿನ ಸಭೆಗಳಿಗೆ ಬರುವುದೇ ಇಲ್ಲ ಎಂದು ಗುರುಮಠಕಲï ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಂಗಳವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ಸಂಸದ ಜಿ.ಕುಮಾರ ನಾಯಕ್ ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಸಭೆಗೆ ಬರುವಾಗ ಮಾಡಿದ ಕೆಲಸಗಳ ಬಗ್ಗೆ ನಿಖರ ಮಾಹಿತಿ ಕೊಡಿ ಇಲ್ಲದಿದ್ದರೆ, ಸುರಪುರ ಶಾಸಕರು ರಾಂಗ್ ಆಗುತ್ತಾರೋ ಗೊತ್ತಿಲ್ಲ. ಆದರೆ ನಾನು ಮಾತ್ರ ರಾಂಗ್ ಆಗುವುದು ಗ್ಯಾರಂಟಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಒಂದು ಕೆಲಸವೂ ಪ್ರೋಗ್ರೆಸ್ ಆದ ಬಗ್ಗೆ ಮಾಹಿತಿನೇ ಇಲ್ಲ. ಅದೇ ಹಳೇ ಕಥೆ ಹಿಡಿದುಕೊಂಡು ಬಂದು ಮತ್ತೊಂದು ಕಥೆ ಹೇಳಿದರೆ ಜನರು ನಮ್ಮನ್ನು ಸುಮ್ಮನ್ನೆ ಬಿಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಕೃಷಿ ಇಲಾಖೆಯಿಂದ ಹಿಡಿದು ಸುಮಾರು ೧೧ ಮಹತ್ವದ ಇಲಾಖೆಗಳ ಪ್ರಗತಿ ನೋಟವನ್ನು ಅಧಿಕಾರಿಗಳು ಮಂಡಿಸುವಾಗ ಅದನ್ನು ಕೇಳಿದ ಕಂದಕೂರ, ಎಲ್ಲ ಹಳೆಯz್ದೆÃರೀ, ಹೊಸದು ಏನು ಇದೆ. ಸಂಸದರು ಜಿ¯್ಲÁಧಿಕಾರಿಗಳಾಗಿ ಕೆಲಸ ಮಾಡಿದವರಿz್ದÁರೆ. ಅವರ ಮುಂದೆ ಕಾಗಿ, ಗುಬ್ಬಚ್ಛಿ ಕಥೆ ಹೇಳಬೇಡಿ ಎಂದರು.
ಆರೋಗ್ಯ ಇಲಾಖೆ ಕುರಿತು ಡಿಎಚ್‌ಒ ಡಾ.ಮಹೇಶ ಬಿರಾದಾರ ಅವರು ವಿಷಯ ಮಂಡಿಸುವಾಗ ದಾಖಲೆ ಹಿಡಿದು ತೋರಿಸಿದ ಶಾಸಕ ಶರಣಗೌಡ, ಏನ್ರಿ ಎಚ್‌ಐವಿ ರೋಗ ಕುರಿತು ತಪ್ಪು ಮಾಹಿತಿ ಹೇಳುತ್ತಿದ್ದಿರಿ, ಇದು ನೋಡಿದ ನನಗೆ ಗಾಬರಿಯಾಯಿತು. ಅದು ಏನು ಅಂತ ಸರಿ ಹೇಳಿ ಎಂದು ದಬಾಸಿದಾಗ, ಸರ್ ಅಂಕಿ, ಅಂಶ ತಪ್ಪಾಗಿದೆ ಎಂದು ಸಮಜಾಹಿಸಿ ನೀಡಲು ಅಧಿಕಾರಿಗಳು ಮುಂದಾಗುತ್ತಲೇ ಸಂಸದ ನಾಯಕ್ ಮತ್ತು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಅಧಿಕಾರಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
ಹೀಗೆ ಜಲಜೀವನ ಮಷಿನ್, ಶಾಲಾ ಶಿP್ಷÀಣ ಇಲಾಖೆ, ನರೇಗಾ, ಪಶು ಇಲಾಖೆ, ರಾಷ್ಟಿçÃಯ ಹೆz್ದÁರಿ ಸೇರಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಅಧಿಕಾರಿಗಳು ಹೇಳಿದಾಗ ಶಾಸಕರು, ಎಲ್ಲದಕ್ಕೂ ವಿವರಣೆಯೊಂದಿಗೆ ಪರಿಹಾರ ಸೂಚಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಇರುವ ಅನುದಾನ ಎಲ್ಲರಿಗೂ ಸಮಾನವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಕಂದಕೂರ ಸಲಹೆ ನೀಡಿದರು. ಸಂಸದ ಕುಮಾರ ನಾಯಕ್ ಕೂಡ ಅಧಿಕಾರಿಗಳ ಕಾರ್ಯವೈಖರಿ, ಮಾಹಿತಿ, ಬಳಸುವ ಭಾಷೆ ಬಗ್ಗೆ ಸೂಚ್ಯವಾಗಿ ತಿವಿದು ಬದಲಿಸಿಕೊಳ್ಳಿ ಮತ್ತು ಮುಂದಿನ ಸಭೆಗೆ ಎಲ್ಲವೂ ಸರಿಯಾಗಿ ಅಫ್‌ಡೆಟ್ ಆಗಿ ಬನ್ನಿ ಎಂದರು.
ಇದೆಲ್ಲ ಗಮನಿಸಿದ ನೂತನ ಡಿಸಿ ಹರ್ಷಲ್ ಬೋಯರ್, ವಿವಿಧ ಇಲಾಖೆಗಳಿಗೆ ಕ್ಲಾಸ್ ತೆಗೆದುಕೊಂಡು ನಾಳೆ ಮತ್ತು ನಾಡಿದ್ದು ತಮ್ಮನ್ನು ಭೇಟಿ ಮಾಡಿ ಎಂದರು.