ಅದೃಷ್ಟಶಾಲಿ ನಾರಿಯರ ಆಯ್ಕೆ

9rajesh1
Published on

ಚಾಮರಾಜನಗರ: ಮಹಿಳೆಯರಲ್ಲಿ ಪತ್ರಿಕೆ ಓದುವ ಹವ್ಯಾಸದ ಜತೆಗೆ, ಸಾಮಾನ್ಯ ಜ್ಞಾನ ವೃದ್ಧಿಸುವ ಉದ್ದೇಶದಿಂದ ನಂ.1 ದಿನಪತ್ರಿಕೆ ಕನ್ನಡ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಚಾಮರಾಜನಗರ ತಾಲೂಕಿನ ಐವರು ಅದೃಷ್ಟಶಾಲಿ ಮಹಿಳೆಯರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.

ನಗರದ ಪಿಡಬ್ಲುೃಡಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 7ನೇ ವರ್ಷದ ಆಡು ಬಾ ನನ ಕಂದ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಾರಿ ನಿನಗೊಂದು ಸ್ಯಾರಿ ವಿಜೇತರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ಪತ್ರಿಕೆಯಿಂದ 45 ದಿನಗಳ ಕಾಲ ಸ್ಪರ್ಧೆ ಆಯೋಜಿಸಿತ್ತು. ಪ್ರತಿದಿನವೂ ಒಂದೊಂದು ಪ್ರಶ್ನೆಗಳನ್ನು ಕೇಳಲಾಗಿತ್ತು. ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ವ್ಯಾಪಕ ಸ್ಪಂದನೆ ಸಿಕ್ಕಿತ್ತು. ಅತ್ಯುತ್ಸಾಹದಿಂದ ಭಾಗವಹಿಸಿದ್ದ ಮಹಿಳಾ ಓದುಗರು, ಪೈಪೋಟಿ ಬಿದ್ದವರಂತೆ ಲಿಖಿತ ಉತ್ತರ ನೀಡಿದ್ದರು.

ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ತಾಲೂಕುಗಳಲ್ಲಿ ಪ್ರತ್ಯೇಕವಾಗಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಚಾಮರಾಜನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗ ಕಲಾವಿದೆ ನಂದಿನಿ ರವಿಕುಮಾರ್, ಪಿಡಬ್ಲುೃಡಿ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸುಗಂಧಿನಿ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿ ಮಹಿಳೆಯರನ್ನು ಆಯ್ಕೆ ಮಾಡಿದರು.

ನಗರ ಮತ್ತು ಹಳ್ಳಿಗಳಿಂದ ಬಂದಿದ್ದ ಕೂಪನ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅದೃಷ್ಟಶಾಲಿಗಳ ಹೆಸರು, ವಿಳಾಸವನ್ನು ತಿಳಿಸಿದರು. ಸ್ಪರ್ಧೆಯಲ್ಲಿ ಒಟ್ಟು ಐವರು ಮಹಿಳೆಯರು ಆಯ್ಕೆಯಾಗಿ ಸೀರೆ ಗೆದ್ದರು.

ಕಾರ್ಯಕ್ರಮದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಖಜಾಂಚಿ ಮತ್ತು ಶಿಬಿರದ ವ್ಯವಸ್ಥಾಪಕ ಶಿವಶಂಕರ್ ಚಟ್ಟು ಮಾತನಾಡಿ, ವಿಜಯವಾಣಿ ದಿನಪತ್ರಿಕೆ ಓದುಗರಿಗಾಗಿ ಗಮನ ಸೆಳೆಯುವ ಸ್ಪರ್ಧೆಗಳನ್ನು ಮಾಡುತ್ತಾ ಬಂದಿದೆ. ಮಹಿಳಾ ಓದುಗರಿಗಾಗಿ ನಡೆಸುವ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಹೆಸರುವಾಸಿಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆ ಅಧಿಕವಿದೆ ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷ ಮತ್ತು ಶಿಬಿರದ ನಿರ್ದೇಶಕ ಶಿವು ಜನ್ನೂರು ಹೊಸೂರು, ಚಿತ್ರನಟ ರಮೇಶ್ ಪಾಪಯ್ಯ ಸಿದ್ದಯ್ಯನಪುರ, ಹಿರಿಯ ಕಲಾವಿದ ಎಂ.ಸಿದ್ದರಾಜು ಮತ್ತು ಶಿಬಿರದ ಮಕ್ಕಳು ಇದ್ದರು.

ಸೀರೆ ಗೆದ್ದವರು

ಚಾಮರಾಜನಗರ ಜೈಲ್ ಕ್ವಾಟ್ರರ್ಸ್ ನಿವಾಸಿ ಆರ್.ವಿ.ಚಿನ್ಮಯಿ, ಕುಲುಮೆ ರಸ್ತೆಯ ಎಂ.ಮಾನಸಾ, ಬಂಡಿಗೆರೆ ಗ್ರಾಮದ ಗೀತಾ ಕೃಷ್ಣ, ಕಾಗಲವಾಡಿ ಗೌರಿಬೀದಿ ಎಂ.ಸುಧಾ ಪ್ರಸನ್ನ, ಅಮಚವಾಡಿ ಗೀತಾ ವರದರಾಜು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net