

ಚಿತ್ರದುರ್ಗ: ಅಕ್ರಮ ಗಣಿಗಾರಿಕೆ ಆರೋಪದಡಿ ಕಬ್ಬಿಣದ ಅದಿರು ತುಂಬಿದ್ದ ಐದು ಲಾರಿಗಳನ್ನು ಶುಕ್ರವಾರ ಭೀಮಸಮುದ್ರದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಿಂಡದಹಳ್ಳಿ ಸರ್ವೆ ನಂ.38 ರಲ್ಲಿ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಅವುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದೆಂದು ಚಿತ್ರದುರ್ಗ ವಲಯ ಅರಣ್ಯಾಧಿಕಾರಿ ವಸಂತ್ ತಿಳಿಸಿದ್ದಾರೆ.
ಜಮೀನು ಮಾಲೀಕರ ದೂರು ಆಧರಿಸಿ 3 ಲಾರಿಗಳಲ್ಲಿದ್ದ ಅದಿರಿನ ಪರ್ಮಿಟ್‌ಗೆ ತಾಳೆಯಾಗುತ್ತಿಲ್ಲ. ಇನ್ನೆರಡು ಲಾರಿಗಳಲ್ಲಿದ್ದ ಅದಿರಿ ಗೆ ಪರ್ಮಿಟ್ ಇಲ್ಲದ ಕಾರಣಕ್ಕೆ ಅವುಗಳನ್ನೂ ವಶಕ್ಕೆ ಪಡೆಯಲಾಗಿದೆ. ಪಟ್ಟಾ ಜಮೀನಾಗಿರುವುದರಿಂದ, ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸಲಾಗುತ್ತದೆ. ಸ್ಥಳದಲ್ಲಿದ್ದ ಇನ್ನೂ 3 ಲಾರಿಗಳನ್ನೂ ವಶಕ್ಕೆ ಪಡೆಯಬೇಕಿದೆ. ಲಾರಿಗಳಲ್ಲಿದ್ದ ಅದಿರು ಪರ್ಮಿಟ್‌ಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸುವುದಾಗಿ ಆರ್‌ಎಫ್‌ಒ ತಿಳಿಸಿದ್ದಾರೆ.