

ಕಲಬುರಗಿ: ನಗರದ ಜಿಲ್ಲಾ ಕೋರ್ಟ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶನಿವಾರ ಹಮ್ಮಿಕೊಂಡ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ಕುಟುಂಬ ನ್ಯಾಯಾಲಯದಲ್ಲಿ ಹಲವು ದಿನಗಳಿಂದ ಬೇರ್ಪಟ್ಟು, ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ ಆರು ಜೋಡಿ ದಂಪತಿಯನ್ನು ಒಂದುಗೂಡಿಸಲಾಯಿತು.
ರಾಷ್ಟಾçದ್ಯAತ ನಡೆದ ಲೋಕ ಅದಾಲತ್‌ನಲ್ಲಿ ವಿಶೇಷವಾಗಿ ಕಳೆದ ೧೦ ವರ್ಷದಿಂದ ವಿಚ್ಛೇಧನ ಅರ್ಜಿ ಸಲ್ಲಿಸಿದ್ದ ಐದು ಪ್ರಕರಣಗಳನ್ನು ಬಗೆಹರಿಸಿ, ದಂಪತಿಯನ್ನು ಒಂದುಗೂಡಿಸಿದ್ದು ಗಮನ ಸೆಳೆಯಿತು.
ಶನಿವಾರ ಹಲವು ದಿನಗಳಿಂದ ಬಾಕಿ ಉಳಿದಿದ್ದ, ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳನ್ನು ವಿಚಾರಣೆ ನಡೆಸಿ, ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.
ಜಿಲ್ಲಾ ಕೋರ್ಟ್ನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ೮೫,೭೨೭ ಪ್ರಕರಣಗಳು ಇತ್ಯರ್ಥಗೊಂಡಿದೆ. ೫೨.೫೫ ಲಕ್ಷ ರೂ. ಪರಿಹಾರ ಮೊತ್ತ ಇತ್ಯರ್ಥಗೊಂಡಿದೆ. ಲೋಕ ಅದಾಲತ್‌ನಲ್ಲಿ ಸಿವಿಲ್ ದಾವೆಗಳು, ಮೋಟಾರ್ ವಾಹನ, ಅಪಘಾತ ಪರಿಹಾರ ಪ್ರಕರಣ, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣ, ಭೂಸ್ವಾಧೀನ ಪರಿಹಾರ, ವಸೂಲಾತಿ ಪ್ರಕರಣ, ಬ್ಯಾಂಕ್ ವ್ಯಾಜ್ಯಪೂರ್ವ ಪ್ರಕರಣ, ನೀರಿನ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ, ನ್ಯಾಯಾಧೀಶೆ ಎಸ್.ನಾಗಶ್ರೀ, ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಕ್ಷಿದಾರರು, ನ್ಯಾಯಾಧೀಶರು, ಸಂಧಾನಕಾರರು, ಸಂಬAಧಪಟ್ಟ ನ್ಯಾಯವಾದಿಗಳು ರಾಜಿ ಸಂಧಾನದಲ್ಲಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.