ಅದಾಲತ್ ನಲ್ಲಿ 1655 ಪ್ರಕರಣ ಇತ್ಯರ್ಥ

IMG_20200919_120532
Published on

ಬೀದರ್: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ಇ-ಮೆಗಾ ಲೋಕ ಅದಾಲತ್ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡಲೂರ ಸತ್ಯನಾರಾಯಾಣಾಚಾರ್ಯ ಅವರ ಮಾರ್ಗದರ್ಶನಲ್ಲಿ ಅದಾಲತ್ ಜರುಗಿತು.

ಅದಾಲತ್ ನಲ್ಲಿ ಒಟ್ಟು 293 ವ್ಯಾಜ್ಯ ಪೂರ್ವ ಪ್ರಕರಣ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 3663 ಪ್ರಕರಣಗಳನ್ನು ರಾಜಿ ಸಂದಾನಕ್ಕಾಗಿ ಗುರುತಿಸಲಾಗಿತ್ತು. ಈ ಪೈಕಿ 281 ವ್ಯಾಜ್ಯಪೂರ್ವ ಮತ್ತು 1374 ಬಾಕಿ ಪ್ರಕರಣಗಳು ಸೇರಿ ಒಟ್ಟು 1655 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. ಒಟ್ಟು ರೂ. 4,73,94,803 ರಾಜಿ ಸಂದಾನದ ಮೊತ್ತವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net