ಅಥ್ಲೆಟಿಕ್ಸ್ ಕ್ರಿಡಾಕೂಟದಲ್ಲಿ ಮಕ್ಕಳ ಕಲರವ

2807KLB06
Published on

ಕಲಬುರಗಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಜಾವೆಲಿನ್ ಡೇ ನಿಮಿತ್ತ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ೪೫೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕ್ರೀಡಾ ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶಕುಮಾರ, ಜಿಲ್ಲಾ ಅಥ್ಲೆಟಿಕ್ಸ್ ಕಾರ್ಯದರ್ಶಿ ಧನರಾಜ ಭಾಸಗಿ, ಸಿ.ಎನ್. ಬಾಬಳಗಾಂವ, ನಾಗರಾಜ ಮಾಳಗೆ, ಸಂಜಯ ಬಾಣದ್ ಸಂತೋಷ ಡಿಗ್ಗಿ, ದತ್ತಾತ್ರೇಯ ಜೇವರ್ಗಿ, ಸಂತೋಷ ಭಾವಿಮನಿ, ಪ್ರವೀಣ ಪುಣೆ ಇತರರಿದ್ದರು. ಉಮೇಶ ಶರ್ಮಾ ನಿರೂಪಣೆ ಮಾಡಿದರು.
ಸ್ಪರ್ಧೆಯಲ್ಲಿ ವಿಜೇತರು: ೬೦೦ ಮೀಟರ್ ಓಟ. ಬಾಲಕ: ಚಂದ್ರಶೇಖರ ಪಾಟೀಲ್ ಪಬ್ಲಿಕ್ ಶಾಲೆಯ ಸಾಯಿಕುಮಾರ (ಪ್ರಥಮ), ದಾಮೋಧರ ರಘೋಜಿ ಶಾಲೆಯ ಪೃಥ್ವಿ (ದ್ವಿತೀಯ), ರೋಟರಿ ಕ್ಲಬ್ ಶಾಲೆಯ ಶಿವಾಜಿ (ತೃತೀಯ). ೬೦ ಮೀಟರ್ ಬಾಲಕಿ: ಚಂದ್ರಶೇಖರ ಪಾಟೀಲ್ ಪಬ್ಲಿಕ್ ಶಾಲೆಯ ರಿಯಾ (ಪ್ರ), ಶ್ಲೋಕ್ ಬಿರ್ಲಾ ಶಾಲೆಯ ಅಧಿರಾ (ದ್ವಿ), ದಾಮೋಧರ ರಘೋಜಿ ಶಾಲೆಯ ಶ್ರೀನಿಧಿ (ತೃ). ೮೦ ಮೀ. ಬಾಲಕಿ: ಎನ್‌ಪಿಎಸ್ ಶಾಲೆಯ ಉಮೇಜ್ (ಪ್ರ), ಸೆಂಟ್ ಮೇರಿ ಶಾಲೆಯ ಅನನ್ಯ (ದ್ವಿ), ಎನ್‌ಪಿಎಸ್ ಶಾಲೆಯ ಪ್ರಿಶಾ ತೃತೀಯ ಸ್ಥಾನ ಪಡೆದಿದ್ದಾರೆ.
೮೦ ಮೀ. ಬಾಲಕ: ಎನ್‌ಪಿಎಸ್ ಶಾಲೆಯ ನಕ್ಷಾ (ಪ್ರ), ವಿಜಯ ವಿದ್ಯಾಲಯದ ಮಾಳಪ್ಪ (ದ್ವಿ), ಎಸ್‌ಆರ್‌ಎನ್ ಮೆಹತಾ ಶಾಲೆಯ ಫೈಜಾನ್ (ತೃ). ೬೦೦ ಮೀ.ಬಾಲಕಿ: ಎಸ್‌ಆರ್‌ಎನ್ ಮೆಹತಾ ಶಾಲೆಯ ಶ್ವೇತಾ (ಪ್ರ), ಎಸ್‌ಆರ್‌ಎನ್ ಮೆಹತಾ ಶಾಲೆಯ ಪೂರ್ವಿ (ದ್ವಿ), ಮಿಲೇನಿಯಂ ಶಾಲೆಯ ಲಕ್ಷಿö್ಮÃ (ತೃ). ೧೦೦ ಮೀ. ಬಾಲಕಿ: ಸೆಂಟ್ ಜೋಸೆಫ್ ಕಾನ್ವೆಂಟ್ ಸಾಕ್ಷಿ (ಪ್ರ), ಎನ್‌ಪಿಎಸ್ ಶಾಲೆಯ ಅನಾಮಿಕ (ದ್ವಿ), ಹುಸೇನ್ ಪಬ್ಲಿಕ್ ಶಾಲೆಯ ಮಲಿಹಾ (ತೃ). ೧೦೦ ಮೀ.ಬಾಲಕ: ನಿಡಗುಡದ ಮುರಾರ್ಜಿ ದೇಸಾಯಿ ಶಾಲೆಯ ಅರ್ಜುನ (ಪ್ರ), ಸೆಂಟ್ ಮೇರಿ ಶಾಲೆ ಆಯುಷ (ದ್ವಿ), ಸೆಂಟ್ ಮೇರಿ ಶಾಲೆ ಬಸವರಾಜ ತೃತೀಯ ಸ್ಥಾನ ಪಡೆದಿದ್ದಾರೆ.
೬೦೦ ಮೀ. ಬಾಲಕ: ರೋಟರಿ ಕ್ಲಬ್ ಶಾಲೆಯ ವೀರೇಶ (ಪ್ರ), ದಾಮೋಧರ ರಘೋಜಿ ರೋಟರಿ ಶಾಲೆಯ ಪ್ರಶಾಂತ (ದ್ವಿ), ವಿಜಯ ವಿದ್ಯಾಲಯದ ಶರಣಬಸವ (ತೃ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net