

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ದೇವರ ಹಿಪ್ಪರಗಿ, ವಿಜಯಪುರ ಸಹಯೋಗದಲ್ಲಿ ಆಗಸ್ಟ್ 5 ರಿಂದ 8 ರ ವರೆಗೆ ವಿಜಯಪುರದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8 ನೇ ಅಂತರ್‌ವಲಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಲಿಂಗರಾಜ ಮಹಾವಿದ್ಯಾಲಯ, 41 ಪದಕ ಪಡೆದು 204 ಅಂಕಗಳೊಂದಿಗೆ ಸತತ 8 ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ 7 ಚಿನ್ನ, 10 ಬೆಳ್ಳಿ, 08 ಕಂಚಿನ ಪದಕ ಪಡೆದು 134 ಅಂಕಗಳೊಂದಿಗೆ ಮಹಿಳೆಯರ ವಿಭಾಗದ ಸಮಗ್ರ ವೀರಾಗ್ರಣಿ ಹಾಗೂ ಪುರುಷರ ವಿಭಾಗದಲ್ಲಿ 04 ಚಿನ್ನ, 06 ಬೆಳ್ಳಿ, 06 ಕಂಚಿನ ಪದಕ ಪಡೆದು 70 ಅಂಕಗಳೊಂದಿಗೆ ಪುರುಷರ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಸ್ವರಾಂಜಲಿ ಜಾದವ್ ಹೆಪ್ಲೆಥಟಲಾನ್, 4x100 ರಿಲೆ ಚಿನ್ನ, ಎತ್ತರ ಜಗಿತ, ಗುಂಜನ್ ನಿಲಜಕರ್ 4x100 ರಿಲೆ ಚಿನ್ನ, 100 ಮೀ ಹರ್ಡಲ್, ಹೆಪ್ಲೆಥಟಲಾನ್ ಬೆಳ್ಳಿ, ರಮಲ್ ಗಡಕರಿ 200 ಮಿ ಬೆಳ್ಳಿ, 100 ಮೀ ಕಂಚು, 4x100 ರಿಲೆ ಚಿನ್ನ, ಪ್ರಿಯಾ ಜಾದವ್ 100 ಮೀ ಕಂಚು, 4x100 ರಿಲೆ ಚಿನ್ನ, ಸೃಷ್ಠಿ ಪಾಟೀಲ 20 ಕಿ.ಮಿ ವಾಕ್ ಚಿನ್ನ, ಗೀತಾಂಜಲಿ 400 ಮೀ ಕಂಚು, 4x400 ರಿಲೆ ಬೆಳ್ಳಿ, ಕಾವೇರಿ ಗಸ್ತಿ 800 ಮೀ ಕಂಚು, 4x400 ರಿಲೆ ಬೆಳ್ಳಿ, ರಮ್ಯಾ ಜಿರಲಿ 1500 ಮೀ ಬೆಳ್ಳಿ, 4x400 ರಿಲೆ ಬೆಳ್ಳಿ, ಭಾಗ್ಯಶ್ರೀ 10 ಕಿ.ಮಿ ಓಟ ಬೆಳ್ಳಿ, 4x400 ಬೆಳ್ಳಿ, ಕೃತಿಕಾ ಎತ್ತರ ಜಿಗಿತ ಬೆಳ್ಳಿ, ಟ್ರಿಪಲ್ ಜಂಪ್ ಕಂಚು, ಪ್ರವೀಣಾ ಬೆಡಸೂರ ಚಕ್ರ ಎಸೆತ ಚಿನ್ನ, ನಾಗೇಶ್ವರೀ ಚಕ್ರ ಎಸೆತ, ಹ್ಯಾಮರ್ ಥ್ರೋ ಕಂಚಿನ ಪದಕವನ್ನು ಪಡೆದಿದ್ದಾರೆ,
ಪುರುಷರ ವಿಭಾಗದಲ್ಲಿ ವಿಜಯ ಸಾವತಕರ್ 10 ಕಿ.ಮಿ ಚಿನ್ನ, 5 ಕಿ.ಮಿ ಬೆಳ್ಳಿ 4x400 ರಿಲೆ ಬೆಳ್ಳಿ, 4x400 ಮಿಕ್ಸ್ ರಿಲೆ ಬೆಳ್ಳಿ, ಶಶಿಕಾಂತ ಜಗನೂರ 400 ಮೀ ಹರ್ಡಲ್ಸ್ ಕಂಚು, 4x400 ರಿಲೆ ಬೆಳ್ಳಿ, 4x400 ಮಿಕ್ಸ್ ರಿಲೆ ಬೆಳ್ಳಿ, ವೆಂಕಟೇಶ್ ಕೋಥ್ 4x400 ರಿಲೆ ಬೆಳ್ಳಿ, ಬಾಳೇಶ್ ಶಿರಣ್ಣವರ 4ಘಿ400 ರಿಲೆ ಬೆಳ್ಳಿ, ಸುನೀಲ್ ಹೆಂಡೂರಿ 100 ಮೀ, 200 ಮೀ ಕಂಚು, 4x100 ರಿಲೆ ಚಿನ್ನ ನಿಂಗಾನಂದ ಹಿರೇಮಠ ಡೆಕಥ್ಲಾನ್ ಚಿನ್ನ, 110 ಮೀ ಅಡೆತಡೆ ಓಟ ಕಂಚು 4x100 ರಿಲೆ ಚಿನ್ನ ವಿಶಾಲ್ ಸುಳ್ಳನ್ನವರ ಟ್ರಿಪಲ್ ಜಂಪ್ ಬೆಳ್ಳಿ, 4x100 ರಿಲೆ ಚಿನ್ನ, ಪ್ರಸನ್ನ 4x100 ರಿಲೆ ಚಿನ್ನ, ಶುಬಮ್ ಆನಂದ 110 ಮೀ ಹಡಲ್ಸ್ ಬೆಳ್ಳಿ, ಮೊಹಮದ್‌ಕೈಪ್ ಖಾಜಿ ಗುಂಡು ಎಸೆತ ಕಂಚಿನ ಪದಕವನ್ನು ಪಡೆದಿದ್ದಾರೆ.
ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ.ಎಂ.ಎಂ.ಕವಟಗಿಮಠ, ಶಂಕರಣ್ಣ ಮುನವಳ್ಳಿ, ಎಸ್.ಪಾಟೀಲ, ಬಿ.ಆರ್.ಪಾಟೀಲ, ಹಾಗೂ ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ ದೈಹಿಕ ನಿರ್ದೇಶಕ ಡಾ.ಸಿ.ರಾಮಾರಾವ ಅಭಿನಂದಿಸಿದರು.