

ನಂದೇಶ್ವರ: ಅಥಣಿ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇನೆ. ಸವದಿ ಗ್ರಾಮದ ಸಂಗನಬಸವ ಮಠದ ಪ್ರಗತಿಗೆ ಬದ್ಧ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.
ಸಮೀಪದ ಸವದಿ ಗ್ರಾಮದ ಶ್ರೀ ಸಂಗನಬಸವ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನೀಡಿರುವ ಜನರಿಗೆ ಋಣಿಯಾಗಿದ್ದೇನೆ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಸಂಸದೆ ಪ್ರಿಯಾಂಕಾ ಸಂಸದರ ಅನುದಾನದಡಿ ಹೆಚ್ಚು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಸವದಿ ಇಳಕಲ್ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸುವಂತೆ ಸಂಸತ ಅಧಿವೇಶನದಲ್ಲಿ ಮಾತನಾಡಬೇಕು ಮತ್ತು ಅವರ ವಚನಗಳನ್ನು ಎಲ್ಲ ಭಾಷೆಗೆ ಭಾಷಾಂತರಗೊಳಿಸುವ ಕುರಿತು ಮಾತನಾಡಬೇಕು ಎಂದು ವಿನಂತಿಸಿದರು.
ಡಾ. ಬಸವಲಿಂಗ ಸ್ವಾಮೀಜಿ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ರಮೇಶಗೌಡ ಪಾಟೀಲ, ರಮೇಶ ಸಿಂದಗಿ, ಅಪ್ಪಾಸಾಹೇಬ ಅವತಾಡೆ, ಸುನೀಲ ಸಂಕ, ರಾವಸಾಹೇಬ ಐಹೊಳೆ, ಬಸವರಾಜ ಬುಟಾಳಿ, ಚಿದಾನಂದ ಮುಕಣಿ, ರೇಖಾ ಪಾಟೀಲ, ಸಚಿನ ಬುಟಾಳಿ, ಮಲ್ಲನಗೌಡ ಪಾಟೀಲ, ಮಲ್ಲಪ್ಪ ಸೊಂಡಿ, ನಿಂಗಪ್ಪ ನಂದೇಶ್ವರ, ಬಸನಗೌಡ ಪಾಟೀಲ, ಮಲ್ಲಪ್ಪ ಹಂಚಿನಾಳ, ಪ್ರಕಾಶ ಪಾಟೀಲ ಇತರರಿದ್ದರು.