ಅಥಣಿ ಬರಪೀಡಿತ ಘೋಷಿಸಿ

8..3
ಅಥಣಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿ ತಹಸೀಲ್ದಾರ್ ರಾಜು ಬುರ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಹೇಶ ಕುಮಠಳ್ಳಿ, ಗಿರೀಶ ಬುಟಾಳೆ, ಅಶೋಕ ಯಲ್ಲಡಗಿ, ಎಸ್.ಎ.ಮುದಕಣ್ಣವರ,ಧರೆಪ್ಪ ಠಕ್ಕಣವರ, ರವಿ ಸಂಕ, ಶಿವಾನಂದ ಇಂಗಳಿ ಇತರರು ಇದ್ದರು.
Published on

ಅಥಣಿ: ಮಳೆ ಅಭಾವದಿಂದ ಅಥಣಿ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೆ ಬರಪೀಡಿತ ತಾಲೂಕು ಘೋಷಣೆ ಮಾಡಬೇಕು ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿ ಉದ್ದೇಶಿಸಿ ಮಾತನಾಡಿ, ಮೊದಲ ಲಿಸ್ಟ್‌ನಲ್ಲಿ ಅಥಣಿ ತಾಲೂಕು ಬರಪೀಡಿತ ಘೋಷಣೆ ಆಗಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು. ಸಾಕಷ್ಟು ಸಮಸ್ಯೆಗಳಿಂದ ತಾಲೂಕು ತತ್ತರಿಸಿ ಹೋಗುತ್ತಿದು,್ದ ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ವಿದ್ಯುತ್ ಅಭಾವ, ನೀರಿನ ಅಭಾವ ತಲೆದೋರಿದೆ. ಇದರಿಂದ ಬೆಳಗಳು ಒಣಗುತ್ತಿವೆ ಎಂದು ದೂರಿದರು.
ಸರ್ಕಾರ ಯುದ್ಧೋಪಾದಿಯಲ್ಲಿ ಯೋಜನೆ ರೂಪಿಸಬೇಕು. ನಾನು ಶಾಸಕನಿದ್ದ ವೇಳೆ ಹಲವಾರು ರಸ್ತೆ ಕಾಮಗಾರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆ ಎಲ್ಲ ರಸ್ತೆ ಕಾಮಗಾರಿ ಪೂರ್ಣ ಮಾಡಬೇಕು. ಅದರಂತೆ ತಾಲೂಕಿನ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆಯನ್ನು ಅಂದಿನ ಸಿಎಂ ಬೊಮ್ಮಾಯಿ ಮಾಡಿದ್ದಾರೆ. ಕಾಮಗಾರಿ ವಿಳಂಬವಾಗಿದೆ. ಈಗಿನ ಶಾಸಕರು ತಕ್ಷಣ ಕಾಮಗಾರಿ ಶುರು ಮಾಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ರಾಜು ಬುರ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಗಿರೀಶ ಬುಟಾಳೆ, ಎಸ್.ಎ.ಮುದಕಣವರ, ಅಶೋಕ ಯಲ್ಲಡಗಿ, ಧರೆಪ್ಪ ಠಕ್ಕಣವರ, ಡಾ.ರವಿ ಸಂಕ, ಶಿವಾನಂದ ಇಂಗಳಿ, ಪ್ರಭಾಕರ ಚವ್ಹಾಣ, ರಾಜು ಐಹೊಳೆ, ಡಾ.ಶ್ರೀಶೈಲ ಇಂಚಗೇರಿ, ಪುಟ್ಟು ಹಿರೇಮಠ, ಶಸಿ ಸಾಳ್ವೆ, ಶಿವು ಸಿಂಧೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net