

ಅರಟಾಳ: ಅಥಣಿಯನ್ನ ಜಿಲ್ಲಾ ಕೇಂದ್ರವಾಗಿ ೂಷಿಸಬೇಕು ಎಂಬ ಬೇಡಿಕೆ ಗಟ್ಟಿಯಾಗುತ್ತಿದ್ದು, ಯಾವ ತ್ಯಾಗಕ್ಕೂ ಸಿದ್ಧ ಎಂದು ಸಾಮಾಜಿಕ ಕಾರ್ಯಕರ್ತ ಸದಾನಂದ ಮಾಡಗ್ಯಾಳ ಹೇಳಿದರು.ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯ ಮಾಡಲಾಗುವುದು. ಸಂಟನೆಗಳು ರೂಪಿಸುವ ಚಳವಳಿ ಮತ್ತು ನ್ಯಾಯಯುತ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು.
ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಅಥಣಿ ನೂತನ ಜಿಲ್ಲಾ ಕೇಂದ್ರವಾಗಿ ೂಷಿಸಬೇಕಿತ್ತು. ಆದರೆ, ಅಥಣಿ ಆರ್ಥಿಕವಾಗಿ, ಸಾಮಾಜಿಕ, ಸಾಂಸತಿಕ ಹಾಗೂ ರಾಜಕೀಯವಾಗಿ ಬಲಿಷ್ಠವಿದ್ದರೂ ಉಪವಿಭಾಗ ಕಚೇರಿ ಬರಲಿಲ್ಲ. 200 ಕಿಮೀ ಕ್ರಮಿಸಿದಾಗ ಜಿಲ್ಲಾ ಕೇಂದ್ರ ತಲುಪುವ ಅನಿವಾರ್ಯತೆ ಇದೆ. ಹಾಗಾಗಿ ಅಥಣಿ ಜಿಲ್ಲೆ ೂಷಿಸಬೇಕು ಎಂದು ಆಗ್ರಹಿಸಿದರು.
ಅಥಣಿಯನ್ನು ಜಿಲ್ಲೆಯಾಗಿಸುವ ಕನಸು ಹೊತ್ತ ಯುವಕರೊಂದಿಗೆ ಎಲ್ಲ ಮಠಾಧೀಶರು ಇದ್ದು, ಹೋರಾಟ ಗಂಭೀರ ಸ್ವರೂಪ ಪಡೆಯುವ ಮೊದಲು ಅಥಣಿ ಜಿಲ್ಲೆ ಎಂದು ೂಷಿಸಬೇಕು ಎಂದು ತೆಲಸಂಗದ ವೀರೇಶ ದೇವರು ಆಗ್ರಹಿಸಿದರು. ರೈತ ಸಂದ ತಾಲೂಕಾಧ್ಯಕ್ಷ ಡಿ.ಎಂ.ನಾಯಿಕ, ರಮೇಶ ವಡ್ಡರ, ಮಾಳಪ್ಪ ಕಾಂಬಳೆ, ಶಿವಾನಂದ ಮಾಳಿ, ಹನುಮಂತ ಪಾಟೀಲ, ಶಂಕರ ಮಾಳಿ, ಶಿವಪುತ್ರ ದಮಡಿ, ಜೋತಿಬಾ ಮಾಳಿ ಇದ್ದರು.