'ಅತ್ಯುತ್ತಮ ಬಾಲ ಕಲಾವಿದ'ನಿಗೆ ಸನ್ಮಾನ

11111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಪೌಲ್ ನರುಲಾ ಅಕಾಡೆಮಿ ಬ್ಯಾಂಕಾಕ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸ್ವರ್ಧೆಯಲ್ಲಿ ಕಿರುಚಿತ್ರದಲ್ಲಿ ಅಭಿನಯಿಸಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಪುರಸ್ಕೃತ ಧಾರವಾಡ ಜೆ.ಎಸ್.ಎಸ್ ಸಂಸ್ಥೆಯ ಸವದತ್ತಿ ರಸ್ತೆಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಅ್ತಾಬ್‌ಹುಸೇನ ಮಮ್ಮಿಗಟ್ಟಿಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಭಿನಂದಿಸಿದರು. ಪ್ರಾಚಾರ್ಯೆ ತ್ರಿವೇಣಿ ಆರ್., ಮಹಾವೀರ ಉಪಾಧ್ಯೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net