ಅತ್ಯಾಚಾರಿಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ಬೇಡ

27 kgl photo4
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಿಗಳಿಗೆ ನೀಡಿರುವ ಶಿಕ್ಷೆಯ ವಿನಾಯಿತಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Published on

ಕೊಳ್ಳೇಗಾಲ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಜನರಿಗೆ ಶಿಕ್ಷೆಯಲ್ಲಿ ನೀಡಿರುವ ವಿನಾಯಿತಿ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಸ್ವರಾಜ್ ಮಹಿಳಾ ಸಂಘಟನೆಯು ಪ್ರತಿಭಟನಾ ಮೆರವಣಿಗೆ ನಡೆಸಿತು.


ಶನಿವಾರ ಪಟ್ಟಣದ ಬಸ್ ನಿಲ್ದಾಣದಿಂದ ಪ್ರಾರಂಭಿಸಿದ ಮೆರವಣಿಗೆ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಡಾ. ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿಗೆ ತಲುಪಿತು. ಈ ವೇಳೆ ತಹಸೀಲ್ದಾರ್ ಮಂಜುಳಾ ಮೂಲಕ ಮುಖ್ಯ ಮಂತ್ರಿಗಳಿಗೆ ಪತ್ರದ ಮನವಿ ಸಲ್ಲಿಸಿದರು. ಕೂಡಲೇ ಅಪರಾಧಿಗಳಿಗೆ ನೀಡಿರುವ ಶಿಕ್ಷೆಯ ವಿನಾಯಿತಿ ಹಿಂಪಡೆಯಬೇಕು. ಮತ್ತೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸ್ವರಾಜ್ ಸಂಘಟನೆಯ ಶಿವಮ್ಮ, ಸರೋಜ, ಕವಿತಾ, ನಿಂಗಮ್ಮ, ಜಯಲಕ್ಷ್ಮಿ, ರೇಣುಕಾ, ಸಿದ್ದಮ್ಮ, ಮಹದೇವಮ್ಮ, ಚನ್ನಜಮ್ಮ, ಭಾಗ್ಯ, ಕೆಂಪಮ್ಮ, ನಿಂಗಮ್ಮ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net