

ಚಿತ್ರದುರ್ಗ: ಕೋಲ್ಕತ್ತಾದ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ನಗರದ ಇನ್ನರ್‌ವೀಲ್ಹ್ ಕ್ಲಬ್ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮದಕರಿನಾಯಕ ವೃತ್ತದಿಂದ ಮೆರವಣಿಗೆ ಮೂಲಕ ಡಿಸಿ ಕಚೇರಿ ಬಳಿ ಆಗಮಿಸಿದ ಪ್ರತಿಭಟನಾಕಾರರು, ದುಷ್ಕರ್ಮಿಗಳು ಈ ಕೃತ್ಯ ಮನುಕುಲವೇ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಈ ವಿಚಾರವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕೃತ್ಯವೆಸಗಿರುವ ಜನರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಕ್ಲಬ್ ಅಧ್ಯಕ್ಷೆ ಪೂಜಾ ಪ್ರದೀಪ್, ಉಪಾಧ್ಯಕ್ಷೆ ವಿಜಯಾ ಕಿರಣ್, ಕಾರ‌್ಯದರ್ಶಿ ನಮ್ರತಾ ದೇವರಾಜ್, ಮೋಕ್ಷಾ ರುದ್ರಸ್ವಾಮಿ, ಶ್ಯಾಮಲಾ ಶಿವಪ್ರಕಾಶ್, ಜ್ಯೋತಿಲಕ್ಷ್ಮಣ್, ಭಾಗ್ಯಮೂರ್ತಿ, ಶೈಲಜಾರೆಡ್ಡಿ, ಚೈತನ್ಯ ಪಿಯು ಕಾಲೇಜು ವಿದ್ಯಾರ್ಥಿಗಳು, ರೋಟರಿ ಹಾಗೂ ವಾಸವಿ ಸಂಸ್ಥೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.