

ರಾಯಬಾಗ: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಸುನೀಲ ದೀಪಾಳೆ (27) ಬಂಧಿತ ಆರೋಪಿ. ರಾಯಬಾಗ ಪಟ್ಟಣದಿಂದ ಕಂಚಕರವಾಡಿ ರಸ್ತೆಯತ್ತ ಹೋಗುತ್ತಿರುವ ಅಪ್ರಾಪ್ತೆಯನ್ನು ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಮೇಲೆ ಕೂಡ್ರಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದಾಗ ಅಪ್ರಾಪ್ತೆಯ ಚೀರಾಟದಿಂದ ಸಾರ್ವಜನಿಕರು ರಸಿ ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಯಬಾಗ ಪೊಲೀಸರು ಯುವಕನ ಮೇಲೆ ಪೋಕ್ಸೋ ಅಡಿ ಪ್ರಕರಣ ದಾಖಲಿಸಿದ್ದಾರೆ.