ಅತ್ಯಾಚಾರ, ಕೊಲೆಗೈದವನಿಗೆ ಗಲ್ಲುಶಿೆ

court
Published on

ಕಲಬುರಗಿ: ೧೦ ರ‍್ಷ ೧ ತಿಂಗಳ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದು ಸಾ ನಾಶ ಮಾಡಲು ದೇಹವನ್ನು ಬಾವಿಯಲ್ಲಿ ಎಸೆದ ಅಪರಾಧಿಗೆ ಗಲ್ಲು ಶಿೆ ಮತ್ತು ಒಂದು ಲ ರೂ. ದಂಡವನ್ನು ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ಆಳಂದ ತಾಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (೨೮) ಶಿೆಗೆ ಒಳಗಾದ ಅತ್ಯಾಚಾರಿ, ಕೊಲೆಗಡುಕ.

೨೦೨೩ ಜು.೧೫ರಂದು ಆಳಂದ ತಾಲೂಕಿನ ದೇವಂತಗಿ ಗ್ರಾಮದಿಂದ ಜವಳಿ (ಡಿ) ಗ್ರಾಮಕ್ಕೆ ಅಪ್ರಾಪ್ತ ಬಾಲಕಿ ನಡೆದು ಹೋಗುತ್ತಿದ್ದಳು. ಈ ವೇಳೆ ಹೊಲದಲ್ಲಿ ಗಳ್ಯಾ ಹೊಡೆಯುತ್ತಿದ್ದ ಅತ್ಯಾಚಾರಿ ಗುಂಡೇರಾವ ಬಾಲಕಿಯನ್ನು ನಿಲ್ಲಿಸಿ, ಬಲವಂತವಾಗಿ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ವೇಳೆ ಬಾಲಕಿ ಪ್ರಜ್ಞೆ ತಪ್ಪಿದ್ದು, ನಂತರ ಪುನ@ ಅತ್ಯಾಚಾರ ಎಸಗಿದ್ದ. ನಂತರ ಈ ವಿಷಯ ಯಾರಿಗಾದರೂ ಹೇಳುವಳು ಎಂದು ತಿಳಿದು ತಲೆಯನ್ನು ನೆಲಕ್ಕೆ ಹೊಡೆದು ಕೊಲೆ ಮಾಡಿದ್ದ. ಮಧ್ಯರಾತ್ರಿ ದೇಹವನ್ನು ತೆರೆದ ಬಾವಿಯ ನೀರಿನಲ್ಲಿ ಬಿಸಾಗಿದ್ದ. ಈ ಕುರಿತು ನಿರ‍್ಬಗಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ನಿರ‍್ಬಗಾ ಸಿಪಿಐ ಭಾಸು ಚವ್ಹಾಣ್​ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ಅವರು ಅತ್ಯಾಚಾರಿ ಗುಂಡೇರಾವ ಚೋಪಡೆಗೆ ಗಲ್ಲು ಶಿೆ ಮತ್ತು ಒಂದು ಲ ರೂ. ದಂಡ ವಿಧಿಸಿದ್ದಾರೆ. ಕಾನೂನು ಪ್ರಾಧಿಕಾರದಿಂದ ಬಾಲಕಿ ತಾಯಿಗೆ ನಾಲ್ಕೂ ಲ ರೂ. ನೀಡುವಂತೆ ಆದೇಶಿಸಿದ್ದರು. ರ‍್ಕಾರದ ಪರವಾಗಿ ಶಾಂತವೀರ ಬಿ.ತುಪ್ಪದ ವಾದಿಸಿದರು. ಸಿಬ್ಬಂದಿ ಮರೆಪ್ಪ ಎಚ್​.ಡಿ.ಸಾದಾರರನ್ನು ಹಾಜರುಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net