ಅತ್ಯಾಚಾರ ಆರೋಪಿಗೆ ೨೦ ವರ್ಷ ಸಜೆ

rape-cases
cartoon
Published on

ಕೋಲಾರ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಕೆಜಿಎಫ್ ತಾಲೂಕು ಗೊಲ್ಲಗುರುವೇನಹಳ್ಳಿಯ ಎಸ್. ಪ್ರವೀಣ್‌ಗೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ೨೦ ವರ್ಷ ಸಜೆ ಜತೆಗೆ ೭೦ ರೂ. ದಂಡ ದಂಡ ವಿಧಿಸಿದೆ.
ಬೇತಮಂಗಲ ಪೊಲೀಸ್ ಠಾಣೆಗೆ ೨೦೨೧ರ ಡಿಸೆಂಬರ್ ೨೫ರಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಠಾಣಾಧಿಕಾರಿ ಸಿಆರ್ ನಂ. ೧೭/೨೦೨೧ ರಂತೆ ಕಲಂ ೩೬೩, ೩೭೬ (೨) (೧) ಐಪಿಸಿ ಮತ್ತು ಕಲಂ ೬ ಪೋಕ್ಸೊ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ತನಿಖೆ ಕೈಗೊಂಡು, ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಸ್ಪೇಷಲ್ ಸಿ.(ಪೋಕ್ಸೋ) ೪೬/೨೦೨೨ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಪಿ.ದೇವಮಾನೆ, ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ೧ನೇ ಆರೋಪಿ ಪ್ರವೀಣ್‌ಗೆ ಕಲಂ ೬ ಪೋಕ್ಸೋ ಕಾಯ್ದೆ ಅಡಿಯಲ್ಲಿ ೨೦ ವರ್ಷ ಸಜೆ ಜತೆಗೆ ೭೦ ರೂ. ದಂಡ ದಂಡ ವಿಧಿಸಿದ್ದು, ದಂಡ ತೆರಲು ವಿಫಲರಾದಲ್ಲಿ ೬ ತಿಂಗಳು ಸಜೆ ವಿಧಿಸಿದ್ದಾರೆ. ಕೃತ್ಯ ನಡೆಯಲು ಸಹಕರಿಸಿದ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ೨ನೇ ಆರೋಪಿ ವೆಂಗಸಂದ್ರದ ಮಂಜುನಾಥ್‌ಗೆ ೪ ವರ್ಷ ಸಜೆ ಜತೆಗೆ ೧೦ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದ್ದಲ್ಲಿ ೩ ತಿಂಗಳ ಸಜೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ೫ ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕಿ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net