ಅತ್ಯಾಚಾರ ಆರೋಪಿಗಳ ಜಾಮೀನು ರದ್ದುಪಡಿಸಲಿ

26-HNL-2
Published on

ಹಾನಗಲ್ಲ: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಜಾಮೀನು ಪಡೆದು ಸಂಭ್ರಮಾಚರಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಕೂಡಲೆ ಈ ಆರೋಪಿಗಳ ಜಾಮೀನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಎಸ್. ರೇಣುಕಾ ಅವರ ಮೂಲಕ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದೆ.

ಪರಿಷತ್‌ನ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ಸಾಮೂಹಿಕ ಅತ್ಯಾಚಾರ ಆರೋಪ ಹೊತ್ತಿರುವ ಆರೋಪಿಗಳು, ದೇಶದ ಪರವಾದ ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಬಂಧನವಾಗಿ ಬಿಡುಗಡೆ ಹೊಂದಿರುವ ರೀತಿಯಲ್ಲಿ ಸಂಭ್ರಮಿಸಿರುವುದು ತಪ್ಪು. ಪ್ರಕರಣದಿಂದ ಇನ್ನೂ ಮುಕ್ತವಾಗದಿದ್ದರೂ ಸಂಪೂರ್ಣ ಪ್ರಕರಣವೇ ಖುಲಾಸೆಯಾದ ರೀತಿಯಲ್ಲಿ ವರ್ತಿಸಿರುವುದು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದೆ. ಇದು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ರೀತಿಯ ವರ್ತನೆ ತೋರಿದ ವ್ಯಕ್ತಿಗಳ ಜಾಮೀನನ್ನು ಕೂಡಲೇ ವಜಾಗೊಳಿಸಬೇಕು. ರಾಜ್ಯ ಸರ್ಕಾರ ತಕ್ಷಣವೇ ಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ಈ ಪ್ರಕರಣದ ಮರುತನಿಖೆ ಕೈಗೊಳ್ಳಲು ಆದೇಶಿಸಬೇಕು ಎಂದು ಆಗ್ರಹಿಸಿದರು.

ಬಸವರಾಜ ಮಟ್ಟಿಮನಿ, ಹರೀಶ ಹಾನಗಲ್ಲ, ಲಿಖಿತ ಹದಳಗಿ, ಶಿವು ಮ್ಯಾದರ, ದರ್ಶನ್ ಕಲಾಲ, ರವಿ ನೆಗಳೂರ, ಮೊಹಮ್ಮದ್ ದೇವಗಿರಿ, ಸಮ್ಮೇದ ಕಂಚಿನೆಗಳೂರ, ಸೃಷ್ಟಿ ಪಾಟೀಲ, ಪ್ರಿಯಾ ಬಾಳಂಬೀಡ, ಸೌಂದರ್ಯಾ ಮೂಲಿಮನಿ, ಪವಿತ್ರಾ ಸಂಗೂರ, ಸಹನಾ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net