ಅತ್ಯಾಚಾರ ಆರೋಪಿ ಲೋಕೇಶ್ವರ ಸ್ವಾಮೀಜಿ ಮಠ ತೆರವು

Oplus_16777216
Oplus_16777216
Published on

ಅತ್ಯಾಚಾರ ಆರೋಪಿ ಲೋಕೇಶ್ವರ ಸ್ವಾಮೀಜಿ ಮಠ ತೆರವು

ಚಿಕ್ಕೋಡಿ: ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಬಂಧನಕೊಳಗಾಗಿರುವ, ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮ ಮಂದಿರ ಮಠದ ಲೋಕೇಶ್ವರ ಸ್ವಾಮೀಜಿಯ ಮಠದ ಕಟ್ಟಡ ತೆರವು ಕಾರ್ಯಾಚರಣೆ ಗುರುವಾರ ನಡೆದಿದೆ.

ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ

8 ಎಕರೆ ಗೈರಾಣ ಜಾಗವನ್ನ ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಲೋಕೇಶ್ವರ ಸ್ವಾಮೀಜಿ ಅಕ್ರಮವಾಗಿ ಮಠ ನಿರ್ಮಿಸಿಕೊಂಡಿದ್ದರ ಕುರಿತು ದೂರು ಕೇಳಿ ಬಂದಿತ್ತು‌.ಇದರ ಕುರಿತು ಪರಿಶೀಲನೆ ನಡೆಸಿದ ರಾಯಬಾಗ ತಹಶಿಲ್ದಾರರ ಮಠ ತೆರವುಗೊಳಿಸುವಂತೆ ಕಳೆದ ವಾರ ನೋಟಿಸ್ ನೀಡಿದ್ದರು.

ರಾಯಬಾಗ ತಹಶಿಲ್ದಾರರ ಸುರೇಶ ಮುಂಜೆ ಸಮ್ಮುಖದಲ್ಲಿ ಮೂರು ಜೆಸಿಬಿ ಬಳಸಿ ಮಠವನ್ನ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net