ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

10-gdg-vageesh lamani photo
Published on

ಗದಗ: ಅಪ್ರಾಪ್ರೆಯನ್ನು ಅತ್ಯಾಚಾರ ಮಾಡಿದ್ದ ಅಪರಾಧಿ ವಾಗೀಶ ಚಂದ್ರಪ್ಪ ಲಮಾಣಿ (35)ಗೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು.
ಘಟನೆ ಕುರಿತು ವಿವರಣೆ ನೀಡಿದ ಸರ್ಕಾರಿ ಅಭಿಯೋಜಕ ಯು.ಎ. ಹಿರೇಮಠ, ಶಿರಹಟ್ಟಿ ತಾಲೂಕಿನ ಕೆರಳ್ಳಿ ತಾಂಡಾದಲ್ಲಿ ವಾಗೀಶ ಚಂದ್ರಪ್ಪ ಲಮಾಣಿ ಅವರ ಮನೆಗೆ ಬಾಲಕಿಯೊಬ್ಬಳು 2020ರ ಮಾರ್ಚ್ 22ರಂದು ಧಾರಾವಾಹಿ ನೋಡಲು ಹೋಗಿದ್ದಳು. ಧಾರಾವಾಹಿ ಮುಗಿದ ನಂತರ ಬಾಲಕಿ ಮನೆಗೆ ವಾಪಸ್ ಹೋಗಲು ಮುಂದಾದಾಗ ವಾಗೀಶ ಬಾಲಕಿಯನ್ನು ಹಿಡಿದುಕೊಂಡು ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದನು. ಈ ಕುರಿತು ಮಂಜಪ್ಪ ಕಾನಪ್ಪ ಲಮಾಣಿ ಎಂಬá-ವವರು ಶಿರಹಟ್ಟಿ ಠಾಣೆಯಲ್ಲಿ ದೂರು ನೀಡಿದ್ದರು. 2020ರ ಮಾರ್ಚ್ 23ರಂದು ವಾಗೀಶನನ್ನು ಬಂಧಿಸಲಾಗಿತ್ತು. ಈ ಕುರಿತು ಶಿರಹಟ್ಟಿ ಠಾಣೆ ಸಿಪಿಐ ಆರ್.ಎಚ್. ಕಟ್ಟಿಮನಿ ಅವರು 2020 ಏಪ್ರಿಲ್ 19ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಳೆದ ಬುಧವಾರ ಸ್ಥಳೀಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ವಿಧಿಸಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net