ಅತ್ಯದ್ಭುತ ಶಕ್ತಿ ಜಾಗೃತಿಗೆ ಬೇಕು ಧ್ಯಾನ

CTD 21 YOGA MURUGA (1)------------
Published on

ಚಿತ್ರದುರ್ಗ: ಅಹಂಕಾರ ನಿಗ್ರಹಕ್ಕೆ ದಾಸೋಹ ಸುಲಭ ಮಾರ್ಗ, ದಾಸೋಹವೆಂದರೆ ನೀಡುವವರು ದೊಡ್ಡವರಲ್ಲ, ಪಡೆಯುವವರೇ ಶ್ರೇಷ್ಠರು ಎಂದು ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಮುರುಘಾಮಠದ ಅನುಭವ ಮಂಟಪದಲ್ಲಿ ಮಠದಿಂದ ಏರ್ಪಡಿಸಿದ್ದ 3 ದಿನಗಳ ಯೋಗ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಗತ್ತನ್ನು ಗೆಲ್ಲುವ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳುವತ್ತ ಸಾಗಿದರೆ ನಮ್ಮ ಸುತ್ತಲ ಪರಿಸರ ತನ್ನಿಂದ ತಾನೆ ಬದಲಾಗುತ್ತದೆ. ಒಂದು ಆರಂಭಕ್ಕೆ ಹೇಗೆ ಅಂತ್ಯವಿರುತ್ತದೆಯೋ ಹಾಗೆ ಅಂತ್ಯವೂ ಮತ್ತೇ ಮತ್ತೆ ಪುಟಿದೇಳುವ ಸಂದರ್ಭವಿರುತ್ತದೆ. ಪ್ರತಿಯೊಬ್ಬರಲ್ಲೂ ಇರುವಂಥ ಅತ್ಯದ್ಭುತ ಶಕ್ತಿಯನ್ನು ಜಾಗೃತಗೊಳಿಸಲು ಧ್ಯಾನ, ಯೋಗ ಸಹಕಾರಿ ಎಂದರು.
ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಕಲ್ಕೆರೆ ತಿಪ್ಪೇರುದ್ರ ಸ್ವಾಮೀಜಿ, ಶ್ರೀ ಮುರುಘೇಶ ಸ್ವಾಮೀಜಿ, ಮೈಸೂರು ಮುರುಘರಾಜೇಂದ್ರ ಮಹಾಲಿಂಗೇಶ್ವರ ಸ್ವಾಮೀಜಿ, ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಇದ್ದರು. ಉಮೇಶ್ ಪತ್ತಾರ್ ನಿರೂಪಿಸಿದರು. ವಿಜಯ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net