ಅತಿವೃಷ್ಟಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲ

20 RON 1
Published on

ರೋಣ: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜನಧ್ವನಿ ಅಭಿಯಾನದ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪುರಸಭೆ ಸದಸ್ಯ ಸಂಗನಗೌಡ ಪಾಟೀಲ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರವು ರೈತ ವಿರೋಧಿ, ಕಾರ್ವಿುಕ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ. ಇಡೀ ಮನುಕುಲ ಆತಂಕಕ್ಕೀಡು ಮಾಡಿರುವ ಕೋವಿಡ್ 19 ವೈರಾಣು ನಿಯಂತ್ರಣ ಕಾರ್ಯಕ್ರಮದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸಿದೆ. ಅಲ್ಲದೆ, ರಾಜ್ಯದ ಬಹುಭಾಗ ಭಾದಿಸುತ್ತಿರುವ ಅತೀವೃಷ್ಟಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷರಾದ ಪರಶುರಾಮಪ್ಪ ಅಳಗವಾಡಿ, ವೀರಣ್ಣಾ ಶೆಟ್ಟರ, ಪುರಸಭೆ ಸದಸ್ಯರಾದ ಭಾವಾಸಾಬ್ ಬೆಟಗೇರಿ, ದಾವಲ್​ಸಾಬ್ ಬಾಡಿನ್, ಹಣಮಂತಪ್ಪಾ ತಳ್ಳಿಕೇರಿ, ಕಾಂಗ್ರೆಸ್ ಮುಖಂಡರಾದ ಬಸವರಾಜ ನವಲಗುಂದ, ಮಂಜುನಾಥ ಹಾಳಕೇರಿ, ಶಫೀಕ್ ಮೂಗನೂರ, ಎಂ.ಎಸ್. ಕಡಿಗೌಡ್ರ, ಸಂಜಯ ದೊಡ್ಡಮನಿ ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net