ಅತಿವೃಷ್ಟಿ ಹಾನಿ ಮಾಹಿತಿ ಕೊಡಿ

Aurad Meeting
Published on

ಔರಾದ್: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ಬಿಟ್ಟಿರುವ ನೀರಿನ ಪ್ರವಾಹದಿಂದ ತಾಲೂಕಿನ್ಯಾದ್ಯಂತ ಆಗಿರುವ ಹಾನಿ ಬಗ್ಗೆ ಅಧಿಕಾರಿಗಳು ಕಾರ್ಯಪ್ರವತ್ತರಾಗಿ ವಾರದೊಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಚಂದ್ರಶೇಖರರಾವ್ ಸೂಚಿಸಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶನಿವಾರ ಜರುಗಿದ ಮಳೆಯಿಂದ ಹಾನಿಯಾದ ವರದಿ ಮಾಹಿತಿ ಕುರಿತ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಮಳೆಯಿಂದ ಅನೇಕ ರೈತರ ಬೆಳೆಗಳು ಹಾನಿಯಾಗಿವೆ. ರಸ್ತೆ, ಸೇತುವೆ ಸೇರಿ ಸಾರ್ವಜನಿಕ ಆಸ್ತಿ ಪಾಸ್ತಿ ಸಹ ನಷ್ಟವಾಗಿದೆ. ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದುಬಿದ್ದಿದ್ದು, ಜನರು ಆತಂಕದಲ್ಲಿದ್ದಾರೆ. ಕೂಡಲೇ ಅಧಿಕಾರಿಗಳು ಹಾನಿಗೊಳಗಾದ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ತಾಪಂ ಇಒ ಮಾಣಿಕರಾವ ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಾಂದ್ ಪಟೇಲ್, ತೋಟಗಾರಿಕೆ ಎಡಿ ಸಚಿನ್, ಪಿಆರ್ ಇ ಎಇಇ ಅಶೋಕ ಸಜ್ಜನಶೆಟ್ಟಿ, ರಮೇಶ ಪಾಂಚಾಳ, ಬಾಲಾಜಿ ನಾಯಕವಾಡೆ, ಕ್ರಾಂತಿಕುಮಾರ, ಅನ್ವರ್ ಜಕಾತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net