

ಕಾಳಗಿ: ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿರುವ ಬಗ್ಗೆ ದೂರುಗಳು ಬಂದಿದ್ದು, ಸಮಗ್ರ ಸಮೀಕ್ಷೆ ನಡೆಸಿ ಅರ್ಹರಿಗೆ ಕೂಡಲೇ ಪರಿಹಾರ ಒದಗಿಸುವ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ತಹಸಿಲ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು, ವಿವಿಧ ಕೆಲಸಗಳಿಗೆ ಗ್ರಾಮೀಣ ಭಾಗದಿಂದ ಸಾಕಷ್ಟು ಜನರು ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಅವರನ್ನು ಸುಮ್ಮನೆ ಅಲೆದಾಡಿಸದೆ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು. ಆಧಾರ್ ನೋಂದಣಿ, ಪಹಣಿ, 371(ಜೆ), ಜಾತಿ ಪ್ರಮಾಣಪತ್ರ ಸೇರಿ ಇನ್ನಿತರ ಸೇವೆಗಳನ್ನು ಸರಿಯಾಗಿ ಒದಗಿಸಿ ಎಂದು ತಾಕೀತು ಮಾಡಿದರು.
ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಅವರು, ಅಲ್ಲಿನ ಅಸ್ವಚ್ಛ ವಾತಾವರಣ ಕಂಡು ಕೆಂಡಾಮAಡಲರಾದರು. ನಿಮ್ಮ ಕಚೇರಿ ಸರಿಯಾಗಿ ಇಟ್ಟುಕೊಳ್ಳಲ್ಲ ಅಂದರೆ ಹೇಗೆ ? ಸ್ವಚ್ಛ ವಾತಾವರಣವಿರಬೇಕು, ಶೀಘ್ರವೇ ಎಲ್ಲ ತ್ಯಾಜ್ಯ ಸ್ಥಳಾಂತರ ಮಾಡಿ ಎಂದು ತಾಕೀತು ಮಾಡಿದರು.
ತಹಸೀಲ್ದಾರ್ ಘಮಾವತಿ, ಗ್ರೇಡ್-2 ತಹಸೀಲ್ದಾರ್ ನಾಗನಾಥ ತರಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ್, ಕ್ಷೇತ್ರ ಶಿP್ಷÀಣಾಧಿಕಾರಿ ಸಿದ್ದವೀರಯ್ಯ ರುದನೂರ, ಕಂದಾಯ ನೀರಿP್ಷÀಕ ಮಂಜುನಾಥ ಮಹಾರುದ್ರ ಇತರರಿದ್ದರು.