ಅತಿವೃಷ್ಟಿ ಪ್ರದೇಶಕ್ಕೆ ಸಚಿವರ ಭೇಟಿ

Prabhu Chavan
Published on

ಬೀದರ್: ಕರೊನಾದಿಂದ ಸಂಪೂರ್ಣ ಗುಣಮುಖರಾಗಿರುವ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಎಂದಿನಂತೆ ಕರ್ತವ್ಯದಲ್ಲಿ ತೊಡಗಿದ್ದಾರೆ. ಕರೊನಾ ಪಾಸಿಟಿವ್ ಬಂದ ನಂತರ ಸಚಿವರು ಚಿಕಿತ್ಸೆ ಪಡೆದ ನಂತರ ನೆಗೆಟಿವ್ ಬಂದಿದೆ. ವೈದ್ಯರ ಸಲಹೆ ಮೇರೆಗೆ ಎರಡು ವಾರದ ಹೋಮ್ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಕ್ವಾರಂಟೈನ್ ಅವಧಿಯಲ್ಲೇ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿತ್ತು. ಹೀಗಾಗಿ ಸಚಿವರು ಗುರುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಅತಿವೃಷ್ಟಿ ಹಾನಿ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 11.30ಕ್ಕೆ ದಿ. ಅನಿಲ ಗುಂಡಪ್ಪ ಮನೆಗೆ ಭೇಟಿ ನೀಡುವರು. ನಂತರ ಬೀದರ್ ತಾಲೂಕಿನ ಕೊಳಾರ್, ಆಣದೂರ, ಭಾಲ್ಕಿ ತಾಲೂಕಿನ ಹಲಬಗರ್ಾ, ಕಮಲನಗರ ತಾಲೂಕಿನ ಹೊಳಸಮುದ್ರಕ್ಕೆ, ಡಿಗ್ಗಿ, ಕಮಲನಗರ ಮುಂತಾದೆಡೆ ಭೇಟಿ ನೀಡುವರು. ಇಲ್ಲಿಂದ ಮಹಾರಾಷ್ಟ್ರದ ಉದಗೀರ್ ತೆರಳಿ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಗ್ರಾಮ ಬೋಂತಿ ತಾಂಡಾಕ್ಕೆ ಬಂದು ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net