ಅತಿವೃಷ್ಟಿ ಪರಿಹಾರ ನೀಡಲು ಆಗ್ರಹ

h14-Konareddy 1
Published on

ಹುಬ್ಬಳ್ಳಿ: ಅತಿವೃಷ್ಠಿಗೆ ಹೆಚ್ಚು ಹಾನಿಗೀಡಾಗಿರುವ ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನ ರೈತರಿಗೆ ಹಾಗೂ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಜೆಡಿಎಸ್ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳು ಹಾಳಾಗಿವೆ. ಕೆರೆ, ಕಟ್ಟೆಗಳು ಕೋಡಿ ಒಡೆದು ಎಲ್ಲೆಡೆ ನೀರು ನಿಂತಿದೆ. ರಸ್ತೆಗಳು ಹಾಳಾಗಿದ್ದು, 300ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಈ ಕೂಡಲೆ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಜೆಡಿಎಸ್ ಹುಬ್ಬಳ್ಳಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಶಿವಪುತ್ರಪ್ಪ ನೆಲಗುಡ್ಡ, ಗುರುಪಾದಪ್ಪ ನೆಲಗುಡ್ಡ, ಸಿದ್ದು ತೇಜಿ, ಚರಂತಯ್ಯ ಹಿರೇಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net